ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ : ನಿರ್ದಿಷ್ಟ ಗುರಿ ಸಾಧಿಸುವ ಛಲ ಬಿಎಸ್ ವೈ ಅವರದ್ದು : ಬಿ.ವೈ ವಿಜಯೇಂದ್ರ

ಸುಬ್ರಹ್ಮಣ್ಯ : ಬಿ.ಯಸ್ ಯಡಿಯೂರಪ್ಪನವರು ಯಾವುದೇ ಅಧಿಕಾರಕ್ಕಾಗಿ ಹೋರಾಟ ಮಾಡಿದವರಲ್ಲ,ಬಡವರ ರೈತರ ಧ್ವನಿಯಾಗಿ ಅವಿರತವಾಗಿ ಕೆಲಸ ಮಾಡಿದಕ್ಕೆ ಅಧಿಕಾರ ಅವರನ್ನು ಹುಡುಕಿಕೊಂಡು ಬಂದಿದೆ. ಯಡಿಯೂರಪ್ಪನವರಿಗೆ ಇಂದಿಗೂ ಒಂದು ನಿರ್ದಿಷ್ಟವಾದ ಗುರಿ ಇದೆ,ಅದು ಸಾಧಿಸುವ ಛಲವೂ ಅವರಲ್ಲಿದೆ ಎಂದು ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಸದ್ಯ ಜೆಡಿಎಸ್ ಮಿಷನ್ 123 ಎಂಬುದು ಈಗಾ ಬರಿ 23 ಎಂದು ಹೇಳಿದರು.

ಬಿಜೆಪಿಗೆ ಪ್ರತ್ಯೇಕ ಗೆಲುವಿನ ತಂತ್ರಗಳು ಎಂಬುದು ಇಲ್ಲ,ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿರುವ ಜನಪರ ಕೆಲಸಗಳೇ ಬಿಜೆಪಿ ಗೆಲುವಿನ ತಂತ್ರ. ಸಿಂದಗಿ ಮತ್ತು ಆನೆಗಲ್ ನಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ನಿರ್ಧಾರಗಳನ್ನು ಪಕ್ಷ ತೆಗೆದುಕೊಂಡಿಲ್ಲ ಎಂದರು. ಕುಕ್ಕೆ ಸುಬ್ರಹ್ಮಣ್ಯದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಬಿಜೆಪಿ ಕಾರ್ಯಕರ್ತರು, ಪಕ್ಷದ ಪ್ರಮುಖರ ಜೊತೆಗೆ ಸಭೆ ನಡೆಸಿ ಬಿ.ವೈ ವಿಜಯೇಂದ್ರರವರು ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು.

Edited By : Manjunath H D
PublicNext

PublicNext

07/10/2021 12:15 pm

Cinque Terre

46.75 K

Cinque Terre

0

ಸಂಬಂಧಿತ ಸುದ್ದಿ