ರಾಮನಗರ: ದೇಶ ಅಧೋಗತಿಗೆ ಹೋಗಲು ಕಾರಣ ಬಿಜೆಪಿ ಹಾಗೂ ಕಾಂಗ್ರೆಸ್ನ ಸ್ವಯಂಕೃತ ಅಪರಾಧ ಕಾರಣವಾಗಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಸಂಘಟನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 'ದೇಶವು ಕವಲು ದಾರಿಯಲ್ಲಿದೆ. ಬಿಜೆಪಿಯನ್ನು ದೇಶದಲ್ಲಿ ಆಡಳಿತಕ್ಕೆ ತಂದಿರುವುದು ಯಾರು? ಇವತ್ತು ದೇಶದಲ್ಲಿ ಶೇ.19 ರಷ್ಟು ಇರುವ ಇಸ್ಲಾಂ ಬಾಂಧವರನ್ನ ಬಿಜೆಪಿಯವರು ದೇಶದ ದ್ರೋಹಿಗಳು ಎಂದು ಬಿಂಬಿಸಲು ಹೊರಟಿದ್ದಾರೆ. ನಾವು ಬೆಂಬಲ ಕೊಟ್ಟ ಕಾಂಗ್ರೆಸ್ ಅನ್ನು ಜನ ತಿರಸ್ಕಾರ ಮಾಡಿದ್ದಾರೆ. ಅಂದು ನಮ್ಮನ್ನು ಕಾಂಗ್ರೆಸ್ ಪಕ್ಷ ಗುಲಾಮರಾಗಿ ನೋಡಿದ್ದರು. ನಮ್ಮಿಂದ ಅವರು ಅಧಿಕಾರ ಸ್ವೀಕಾರ ಮಾಡಿ ನಮ್ಮನ್ನು ಥರ್ಡ್ ಗ್ರೇಡ್ ಸಿಟಿಜೆನ್‌ಗಳಾಗಿ ನೋಡಿದರು ಬಿಜೆಪಿಯವರು ನೀಡುತ್ತಿರುವ ಹಿಂಸೆಯಿಂದ ಇಸ್ಲಾಂ ಬಾಂಧವರನ್ನು ಪಾರು ಮಾಡುತ್ತೇವೆ ಅಂತ ಹೇಳೀ ಅವರನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತಗೊಳಿಸಿದ್ದಾರೆ' ಎಂದು ಅಸಮಾಧಾನ ಹೊರ ಹಾಕಿದರು.
PublicNext
04/10/2021 07:36 am