ನವದೆಹಲಿ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಬುಧವಾರ ಯೋಜನೆಯೊಂದರ ಪ್ರಗತಿ ಪರಿಶೀಲಿಸಲು ಅರುಣಾಚಲ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಹಳ್ಳಿಯ ನಿವಾಸಿಗಳು ನೃತ್ಯ ಮಾಡುತ್ತಾ ಅವರನ್ನು ಬರಮಾಡಿಕೊಂಡಿದ್ದರು. ಅವರೊಂದಿಗೆ ಕಿರಣ್ ರಿಜಿಜು ಅವರು ಸಹ ನೃತ್ಯ ಮಾಡಿದ್ದರು.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಸಚಿವರು, "ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಯ ಮೇಲ್ವಿಚಾರಣೆಯ ಸಲುವಾಗಿ ನಾನು ಕಜಲಾಂಗ್ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಜನರ ಸಾಂಪ್ರದಾಯಿಕ ಹಾಡು ಮತ್ತು ನೃತ್ಯ ಇದಾಗಿದೆ. ಮೂಲ ಜಾನಪದ ಹಾಡುಗಳು ಮತ್ತು ನೃತ್ಯಗಳು ಅರುಣಾಚಲ ಪ್ರದೇಶದ ಸಮುದಾಯದ ಜನರ ಶೈಲಿಯಿದು" ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಕಾನೂನು ಸಚಿವ ಕಿರಣ್ ರಿಜಿಜು ಕೂಡಾ 'ಉತ್ತಮ ನೃತ್ಯಗಾರ' ಎಂದು ಹೇಳಿದ್ದಾರೆ.
PublicNext
30/09/2021 10:07 pm