ಭೋಪಾಲ್: ಕಾಂಗ್ರೆಸ್ ಪಕ್ಷ ಮುಳುಗಿಸಲು ರಾಹುಲ್ ಗಾಂಧಿ ಮಾತ್ರ ಸಾಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಖಾರ್ಗೋನೆ ನಗರದಲ್ಲಿ ನಡೆದ 'ಜನದರ್ಶನ ಯಾತ್ರೆ'ಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, 'ರಾಹುಲ್ ಗಾಂಧಿ ಏಕಾಂಗಿಯಾಗಿ ಕಾಂಗ್ರೆಸ್ ಪಕ್ಷವನ್ನು ಮುಳುಗಿಸುತ್ತಿದ್ದಾರೆ. ಪಂಜಾಬ್ ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿರುವ ಅವರು ನವಜೋತ್ ಸಿಂಗ್ ಸಿಧುಗೋಸ್ಕರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ತೆಗೆದು ಹಾಕಿದರು. ಇದೀಗ ಸಿಧು ಖುದ್ದಾಗಿ ಓಡಿಹೋಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿ ಇರುವವರೆಗೂ ನಾವು ಏನನ್ನೂ ಮಾಡಬೇಕಾಗಿಲ್ಲ' ಎಂದು ಲೇವಡಿ ಮಾಡಿದರು.
PublicNext
29/09/2021 07:00 pm