ಚಿಕ್ಕೋಡಿ: ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಲಕ್ಷ್ಮಣ್ ಸವದಿ ಸ್ಪರ್ಧೆಮಾಡುತ್ತಾರೆಂದು ಮಾತುಗಳು ಈ ಹಿಂದೆ ಸಾಕಷ್ಟು ಮಾತುಗಳು ಕೇಳಿಬರುತ್ತಿದ್ದು ಸಿಂದಗಿ ಉಪಚುನಾವಣೆ ನಾನು ಅಥವಾ ನನ್ನ ಪುತ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ
ಅಥಣಿಯಲ್ಲಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ಅವರು, ರಾಜ್ಯದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಆಗಿದೆ. ನಾವ್ಯಾರೂ ಸ್ಪರ್ಧೆ ಮಾಡುವುದಿಲ್ಲ. ಸಿಂದಗಿ ಉಪಚುನಾವಣೆಯ ಉಸ್ತುವಾರಿಯಾಗಿ ನೇಮಿಸಿದ್ದಾರೆ. ಉಸ್ತುವಾರಿಯಾಗಿ ಚುನಾವಣೆ ಬಿಜೆಪಿ ಅಭ್ಯರ್ಥಿಗೆ ಕೆಲವು ನನ್ನ ಗುರಿ ಎಂದು ತಿಳಿಸಿದರು.
ಎರಡು ದಿನದಲ್ಲಿ ಸಿಂದಗಿ ಕ್ಷೇತ್ರಕ್ಕೆ ತೆರಳಿ ಸ್ಥಳೀಯರ ಅಭಿಪ್ರಾಯ ಸಂಗ್ರಹಣೆ ಮಾಡುತ್ತೇನೆ.ಚುನಾವಣೆ ಪ್ರಚಾರಕ್ಕೆ ಬಿಎಸ್ ಯಡಿಯೂರಪ್ಪನವರು ಬರುತ್ತಾರೆ. ಸಿಂದಗಿ ಹಾನಗಲ್ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸುತ್ತಾರೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರ ಅಕಾಲಿಕ ನಿಧನದಿಂದಾಗಿ ತೆರವುಗೊಂಡಿದ್ದ ಸ್ಥಾನಗಳಿಗೆ ಇದೀಗ ಚುನಾವಣೆ ದಿನಾಂಕ ಘೊಷಣೆ ಯಾಗಿದೆ.ಇದರಿಂದಾಗಿ ಮೂರು ಪಕ್ಷಗಳ ಮತ್ತೆ ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಅಖಾಡಗಳು ರಂಗೇರುತ್ತಿವೆ.
PublicNext
29/09/2021 12:08 pm