ಚಿತ್ರದುರ್ಗ: ಭಾರತ್ ಬಂದ್ ಗೆ ಹಿನ್ನೆಲೆಯಲ್ಲಿ ರೈತರು ವಿಶೇಷ ರೀತಿಯಲ್ಲಿ ಹೊಳಲ್ಕೆರೆ ನಗರದಲ್ಲೂ ಪ್ರತಿಭಟನೆ ನಡೆಸಿದ್ದಾರೆ ದೇಶದಲ್ಲಿ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಮತ್ತಿತರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಎತ್ತುಗಳ ನೊಗಕ್ಕೆ ಓಮಿನಿ ಕಾರನ್ನು ಕಟ್ಟಿ ರೈತರು ಎಳೆಸುತ್ತಿರುವ ದೃಶ್ಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿ ಕಂಡು ಬಂದಿದೆ.
ರೈತರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ಹೊತ್ತೊಯ್ದು ಅರೆಸ್ಟ್ ಮಾಡಿ
ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ ನಂತರ ಬಿಡುಗಡೆಗೊಳಿಸಿದ್ದಾರೆ.
PublicNext
27/09/2021 05:53 pm