ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಇದಕ್ಕೆಲ್ಲ ಕಾರಣ ಅಭಯ ಪಾಟೀಲ್ ಅವರ ಪರಿಶ್ರಮ. ಹಾಗಾಗಿ ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ನಗರದಲ್ಲಿ ಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸಿದ ನೂತನ ಬಿಜೆಪಿ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನಿಲ ಬೆನಕೆ, ಈಗಾಗಲೇ ಅಭಯ ಪಾಟೀಲ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಬೆಳಗಾವಿ ತಾಲೂಕಿಗೆ ಇನ್ನುವರೆಗೆ ಸಚಿವಸ್ಥಾನ ಸಿಕ್ಕಿಲ್ಲ. ರಾಜ್ಯ ಸರ್ಕಾರ ಇದರ ಬಗ್ಗೆ ವಿಚಾರ ಮಾಡಬೇಕು. ಇತಿಹಾಸದಲ್ಲಿ ಆಗದೆ ಇರುವ ಗೆಲುವು ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಸಾಧಿಸಿದೆ ಎಂದರು.
PublicNext
12/09/2021 02:00 pm