ತುಮಕೂರು: ದೇಶದಲ್ಲಿ ಬಹಳಷ್ಟು ಬಂದಿ ತಾಲಿಬಾನಿಗಳಿದ್ದಾರೆ. ಶಾಸಕ ಜಮೀರ್ ಅಹ್ಮದ್ ಕೂಡ ಒಂಥರಾ ತಾಲಿಬಾನಿಯೇ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್‌ಎಫ್‌ಐ, ಪಿಎಫ್‌ಐ ಅವರೆಲ್ಲ ಅವರೆ ತಾಲಿಬಾನಿಗಳು. ಕಾಂಗ್ರೆಸ್ ಹೈನಲ್ಲೂ ತಾಲಿಬಾನ್ಗಳಿದ್ದಾರೆ. ಬೆಂಗಳೂರಲ್ಲಿ ಯಾಕಷ್ಟು ಗಲಾಟೆ ಆಯ್ತು ಎಲ್ಲರಿಗೂ ಗೊತ್ತು. ಶಾಸಕ ಜಮೀರ್ ಕೂಡ ಒಂಥರಾ ತಾಲಿಬಾನೇ. ಬೆಂಗಳೂರು ಗಲಭೆ ಪ್ರಕರಣ ಏಕೆ ಆಯ್ತು..? ಪೊಲೀಸ್ ಠಾಣೆಗೆ ನುಗ್ಗಿ ಹೊಡಿತಾರೇ ಎಂದರೇ ಹುಟುಗಾಟವಲ್ಲ. ಆಗಿನ ಗೃಹಮಂತ್ರಿ, ಇಂದಿನ ಮುಖ್ಯಮಂತ್ರಿ ಸ್ಪಾಟ್‌ಗೆ ಹೋಗಿ ನಿಯಂತ್ರಿಸಿದ್ದರು. ಜಮೀರ್ ಹಾಗೂ ಅಸಾವುದ್ದೀನ್ ನಂತಹವರನ್ನು ಬಂಧಿಸಬೇಕು" ಎಂದು ಆಗ್ರಹಿಸಿದರು.
PublicNext
07/09/2021 02:50 pm