ಬಿಹಾರದ ಗೋಪಾಲಪುರ ಕ್ಷೇತ್ರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಪಟ್ನಾದಿಂದ ದಿಲ್ಲಿಗೆ ತೆರಳುವ ರೈಲಿನಲ್ಲಿ ಒಳ ಉಡುಪಿನಲ್ಲಿ ಓಡಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಶಾಸಕ ಚಲಿಸುವ ರೈಲಿನಲ್ಲಿ ಚಡ್ಡಿ, ಬನಿಯನ್ ಧರಿಸಿ ಓಡಾಡುತ್ತಿರುವಾಗ ಸಹಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಆ ಶಾಸಕರ ಅಸಭ್ಯ ವರ್ತನೆಗೆ ಜಗಳವನ್ನೂ ಆಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಶಾಸಕ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೆ ಆ ಶಾಸಕ ಹೇಳಿದ್ದೇನು ನೀವೆ ಕೇಳಿ..
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವು ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿರುವುದಕ್ಕೆ ಕಾರಣ ತಿಳಿಸಿರುವ ಜೆಡಿಯು ಶಾಸಕ ಗೋಪಾಲ್ ಮಂಡಲ್, ಪ್ರಯಾಣದ ವೇಳೆ ನನ್ನ ಹೊಟ್ಟೆ ಸರಿಯಿರಲಿಲ್ಲ. ಅರ್ಜೆಂಟಾಗಿ ಟಾಯ್ಲೆಟ್ ಗೆ ಹೋಗಬೇಕಾಗಿತ್ತು. ಹೀಗಾಗಿ, ಪ್ಯಾಂಟ್, ಶರ್ಟ್ ಅನ್ನು ಕಂಪಾರ್ಟ್ಮೆಂಟ್ ನಲ್ಲಿ ಬಿಚ್ಚಿಟ್ಟು, ಟಾಯ್ಲೆಟ್ ಕಡೆ ಹೋಗುವಾಗ ಟವೆಲ್ ಸುತ್ತಿಕೊಳ್ಳಲು ಮರೆತು ಹೆಗಲ ಮೇಲೆ ಹಾಕಿಕೊಂಡಿದ್ದೆ. ಅದನ್ನು ಸೊಂಟಕ್ಕೆ ಸುತ್ತಿಕೊಳ್ಳಲು ನಾನು ಮರೆತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
03/09/2021 07:11 pm