ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.1 ರಿಂದ 3 ವರೆಗಿನ ಕೈಗೊಳ್ಳಲಿರುವ ರಾಜ್ಯ ಪ್ರವಾಸದ ವಿವರ ಹೀಗಿದೆ. ಸೆ. 1 ರಿಂದ 3 ದಿನಗಳ ಕಾಲ ರಾಜ್ಯದ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಸೆ.1 ಬೆಳ್ಳಿಗೆ 7.15 ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ 8.45ಕ್ಕೆ ಹುಬ್ಬಳ್ಳಿ ತಲುಪಲ್ಲಿದ್ದು ಅಲ್ಲಿಂದ ರಸ್ತೆ ಮೂಲಕ ಬೆಳಿಗ್ಗೆ . 9.30ಕ್ಕೆ ಹುಬ್ಬಳ್ಳಿಯಿಂದ ಶಿಗ್ಗಾಂವ ತಾಲೂಕಿನಲ್ಲಿ ಕುಮಟಾ-ತಡಸ, ರಸ್ತೆ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಪಡುಬಿದ್ರೆ- ಚಿಕ್ಕಾಲಗುಡ್ಡೆ ರಸ್ತೆ ಸುಧಾರಣಾ ಕಾಮಗಾರಿ, ಪ್ರವಾಸಿ ಮಂದಿರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಅದೇ ದಿನ ಮಧ್ಯಾಹ್ನ 11:30ಕ್ಕೆ ಶಿಗ್ಗಾಂವ ತಾಲೂಕಿನ ಕಲಕಟ್ಟಿ ಯಲ್ಲಿ 39 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ. 12 ಗಂಟೆಗೆ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ನಿರ್ಮಾಣವಾದ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಾಹ್ನ 1ಕ್ಕೆ ಬಂಕಾಪುರ ಗ್ರಾಮದ ಕಾರವಾರ-ಇಳಕಲ್ ರಸ್ತೆ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ, ಶಾದಿ ಮಹಲ್ ನೂತನ ಕಟ್ಟಡ ಉದ್ಘಾಟನೆ, ಮಧ್ಯಾಹ್ನ 2:30ಕ್ಕೆ ಸವಣೂರ ತಾಲೂಕಿನ ಮಣ್ಣೂರಿನಲ್ಲಿ ಕಾಯ್ದಿರಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿ.
3:00 ಗಂಟೆಗೆ ಸವಣೂರ ತಾಲೂಕಿನಲ್ಲಿ ಕಾರವಾರ-ಇಳಕಲ್ ರಸ್ತೆ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ, ಕೆಸಿಸಿ ಬ್ಯಾಂಕ್ ನೂತನ ಕಟ್ಟಡ ಉದ್ಘಾಟನೆ, ಶ್ರೀ ಚನ್ನಬಸವೇಶ್ವರ ಮಂಗಲ ಭವನ ಉದ್ಘಾಟನೆ.
ಸಂಜೆ 4:30 ಗಂಟೆಗೆ ಪ್ರವಾಸಿ ಮಂದಿರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ,ಪೊಲೀಸ್ ಇನ್ಸ್ ಪೆಕ್ಟರ್ /ಡಿ.ವಾಯ್.ಎಸ್.ಪಿ. ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ, ಪುರಸಭೆ ನೂತನ ಕಟ್ಟಡದ ಉದ್ಘಾಟನೆ, ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ, ಕೆ.ಸಿ.ಸಿ. ಬ್ಯಾಂಕ್ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ, ಗೋದಾಮ ಉದ್ಘಾಟನೆ, ಸಾರ್ವಜನಿಕ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಭಾಗಿ.
ಸಂಜೆ 6:45ಕ್ಕೆ ರಸ್ತೆ ಮೂಲಕ ಶಿಗ್ಗಾಂವ ಬಿಟ್ಟು, 7:30 ಗೆ ಹುಬ್ಬಳ್ಳಿಯ ಡೆನಿಸನ್ಸ್ ಹೊಟೆಲ್ ನಲ್ಲಿ ನಡೆಯಲಿರುವ ಸಂಸದ ಜೋಶಿ ಮಗಳ ವಿವಾಹ ಆರತಕ್ಷತೆಯಲ್ಲಿ ಭಾಗಿ ಅಂದು ಹುಬ್ಬಳ್ಳಿಯೇ ವಾಸ್ತವ್ಯ.
ಸೆ. 2 ರಂದು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಕೇಂದ್ರ ಗೃಹಸಚಿವ ಅಮಿತ ಷಾ ಅವರರೊಂದಿಗೆ ಹುಬ್ಬಳ್ಳಿ,ದಾವಣಗೇರಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ. ಅಂದು ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ
ಸೆ.3 ರಂದು ಬೆಳಿಗ್ಗೆ 8:45ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಮಾಣ ಮಾಡಲಿದ್ದಾರೆ ಎಂದು ಸಿಎಂ ಮಾಧ್ಯಮ ಪ್ರತಿನಿಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
30/08/2021 05:30 pm