ಮೈಸೂರು: ಅಪ್ಪಾಜಿ ನನ್ನನ್ನು ಕ್ಷಮಿಸಿ ನಾನು ಜೆಡಿಎಸ್ ಪಕ್ಷ ತೊರೆಯುತ್ತಿದ್ದೇನೆ ಎಂದು ದೊಡ್ಡಗೌಡರಿಗೆ ಸಂದೇಶ ಕಳುಹಿಸಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ, ಇನ್ನು ಮುಂದೆ ಜೆಡಿಎಸ್ ನಲ್ಲಿರಲು ಸಾಧ್ಯವಿಲ್ಲ. ಅಲ್ಲಿ ನನಗೆ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ. ದೇವೇಗೌಡರು ನನ್ನನ್ನು ನೀನು ಮರಿ ದೇವೇಗೌಡ. ನನ್ನೊಂದಿಗೆ ಇರು ಎಂದು ಹೇಳಿದ್ದರು ಆದ್ರೆ ಪಕ್ಷದಲ್ಲಿ ಆದ ಅಪಮಾನಗಳನ್ನು ನಾನು ಸಹಿಸುವುದಿಲ್ಲ ಹಾಗಾಗಿ ಜೆಡಿಎಸ್ ಗೆ ಗುಡ್ ಬೈ ಹೇಳುವ ಕಾಲ ಬಂದಿದೆ ಎಂದಿದ್ದಾರೆ.
PublicNext
24/08/2021 07:06 pm