ಒಡಿಶಾ: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾದಲ್ಲಿ 'ಜನ ಆಶೀರ್ವಾದ ಯಾತ್ರೆ' ನಡೆಸಿದ್ದು, ಕೇಂದ್ರ ಸರ್ಕಾರದ ಕಾರ್ಯಗಳ ಬಗ್ಗೆ ಅಭಿಪ್ರಾಯ ಸ್ವೀಕರಿಸುತ್ತಿದ್ದಾರೆ.
ಕಾಳಹಂಡಿ ನಗರಕ್ಕೆ ತೆರಳುತ್ತಿದ್ದಾಗ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಸ್ತೆ ಬದಿಯ ಪುಟ್ಟ ಅಂಗಡಿಯಲ್ಲಿ ಸುಟ್ಟ ಮೆಕ್ಕೆಜೋಳವನ್ನು ಖರೀದಿಸಿ ರುಚಿ ಸವಿದಿದ್ದಾರೆ. ಬಳಿಕ ಮಹಿಳೆಗೆ ಹಣ ನೀಡಿದ್ದಾರೆ. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಅಲ್ಲಿ ಸೇರಿದ್ದರು.
ಈ ಕ್ಷಣದ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, "ಜನ ಆಶೀರ್ವಾದ ಯಾತ್ರೆಯ ನಡುವೆ ನಬರಂಗಪುರದಲ್ಲಿ ಒಂದು ಚಿಕ್ಕ 'ಮೆಕ್ಕೆ' ವಿರಾಮ" ಎಂದು ಬರೆದುಕೊಂಡಿದ್ದಾರೆ.
PublicNext
21/08/2021 10:40 pm