ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಹಿಣಿ ವಿರುದ್ಧ ಕಿಡಿಕಾರಿದ ಪ್ರತಾಪ್ ಸಿಂಹ : ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯ

ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಕ್ಸಮರ ಮುಂದುವರೆಸಿರುವ ಸಂಸದ ಪ್ರತಾಪ್ ಸಿಂಹ ಐಎಎಸ್-ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ಬ್ಯಾನ್ ಮಾಡಲು ಒತ್ತಾಯಿಸಿದ್ದಾರೆ. ಮೈಸೂರಿನ ಹೊರ ವಲಯದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಫ್ಯಾನ್ಸ್ ಪೇಜ್ ನಿಷೇಧಿಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಗೆ ಮನವಿ ಮಾಡಿದರು.

ಐಎಎಸ್, ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಮಾಡಿದ ಕೆಲಸಗಳನ್ನು ಜಿಲ್ಲಾಡಳಿತದ ಅಕೌಂಟ್ ತೆರೆದು ಅದರಲ್ಲೂ ಮಾಹಿತಿ ಹಾಕಲಿ ಎಂದರು.

ಫ್ಯಾನ್ಸ್ ಪೇಜ್ ಗಳಿಂದ ಹೊಗಳಿಕೆಗಳು ಸೃಷ್ಟಿಯಾಗಿದೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ-ಹೀಗೆ ಅಂತ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಬೇಕು. ಹಾಸನದಲ್ಲಿ ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣ ಮಾಡಬೇಕಾದರೆ ಅಂದಿನ ಜಿಲ್ಲಾಧಿಕಾರಿ ಸಹಕಾರ ನೀಡಲೇ ಇಲ್ಲ ಎಂದು ಹೆಸರೆಳದೇ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

Edited By : Nirmala Aralikatti
PublicNext

PublicNext

20/08/2021 02:59 pm

Cinque Terre

136.29 K

Cinque Terre

16

ಸಂಬಂಧಿತ ಸುದ್ದಿ