ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಸರ್ಕಾರದಿಂದ ಜನತೆಗೆ ಬೂದಿ ಆಶೀರ್ವಾದ: ಡಿಕೆಶಿ ವಾಗ್ದಾಳಿ

ರಾಯಚೂರು: ಹೆಮ್ಮಾರಿ ಕೊರೊನಾದಿಂದ ಸಾವನ್ನಪ್ಪಿದವರ ಮನೆಗೆ ಯಾವುದೇ ಬಿಜೆಪಿ ನಾಯಕರು ಭೇಟಿ ನೀಡಿಲ್ಲ. ಬಿಜೆಪಿ ಸರ್ಕಾರವು ಜನರಿಗೆ ಬೂದಿ ಆಶೀರ್ವಾದ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಕಾಂಗ್ರೆಸ್ ಸಭೆ ಬಳಿಕ ಮಾತನಾಡಿದ ಅವರು, "ಕೊರೊನಾ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿಯನ್ನು ಯಾಕೆ ಬದಲಾವಣೆ ಮಾಡಿದ್ದಾರೆ? ಕೇಂದ್ರ ಆರೋಗ್ಯ ಸಚಿವರನ್ನು ಯಾಕೆ ತೆಗೆದರು ಅಂತ ಬಿಜೆಪಿಯವರೇ ಹೇಳಬೇಕು. ಅಷ್ಟೇ ಅಲ್ಲ ಜನರಿಗೆ ಔಷಧಿ, ಗೋಧಿ, ಆಸ್ಪತ್ರೆ ಬೆಡ್ ಕೊಟ್ಟು ಆಶೀರ್ವಾದ ಮಾಡಲಿಲ್ಲ" ಎಂದು ಕಿಡಿಕಾರಿದರು.

ಸಭೆಯ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಸಭೆಯಲ್ಲಿ ವಿಭಾಗೀಯ ಮಟ್ಟದ ನಾಯಕರಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಟಾರ್ಗೆಟ್ ಏನೆಂದರೆ 75 ವರ್ಷದ ಸ್ವಾತಂತ್ರ್ಯ ಹಿನ್ನೆಲೆ ಇಡೀ ವರ್ಷ ಆಚರಣೆ ಮಾಡುವುದು. ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು. ಒಂದೊಂದು ತಿಂಗಳು ಒಂದೊಂದು ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಅಕ್ಟೋಬರ್ ತಿಂಗಳಲ್ಲಿ ಗಾಂಧಿ ನೆನಪಿನಲ್ಲಿ ಪ್ರತಿ ಪಂಚಾಯತಿಯಲ್ಲಿ ಸಭೆ, ನವೆಂಬರ್ ನೆಹರು ಜನ್ಮದಿನ ಹಿನ್ನೆಲೆ ಪ್ರಜಾಪ್ರಭುತ್ವ ಕುರಿತು ಜಾಗೃತಿ, ಡಿಸೆಂಬರ್ ತಿಂಗಳು ಕಾಂಗ್ರೆಸ್ ಸಂಸ್ಥಾಪನಾ ದಿನ ಹಿನ್ನೆಲೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಎಲ್ಲಾ ಕಾರ್ಯಕರ್ತರಿಗೂ ಕೆಲಸ ಹಂಚುತ್ತಿದ್ದೇವೆ. ನಿಷ್ಕ್ರಿಯ ಇದ್ದವರು ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು ಎನ್ನುವ ಸಂದೇಶ ನೀಡಿದ್ದೇವೆ" ಎಂದರು.

Edited By : Vijay Kumar
PublicNext

PublicNext

17/08/2021 08:02 pm

Cinque Terre

104.93 K

Cinque Terre

8

ಸಂಬಂಧಿತ ಸುದ್ದಿ