ವರದಿ: ಮೌನೇಶ ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ವಿವಿಧ ಭೇಡಿಕೆಗಳನ್ನು ಈಡೇರಿಸಬೇಕೆಂದು ಅಂಗನವಾಡಿ ನೌಕರರು ಅನಿರ್ಧಾಷ್ಟವಧಿ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲಾ ಪಂಚಾಯಿತಿ ಮುಂದೆ ಅಂಗನವಾಡಿ ಕಾರ್ಯೆಕರ್ತರು ಹಾಗೂ ಸಹಾಯಕಿರು
ಇಲಾಖೆ ಸಚಿವರಿಂದಲೇ ಕೋಳಿ ಮೊಟ್ಟೆ ಡೀಲ್ ಹಗರಣದ ಕುರಿತು ತನಿಖೆ ಆಗಬೇಕು,
ನೇರ ವರ್ಗಾವಣೆ ನಿಲ್ಲಬೇಕು,
ಕೊರೋನಾ ಸಂದರ್ಭದಲ್ಲಿ ಮೃತರಾದ ಕಾರ್ಯಕರ್ತರ ಕುಟುಂಬಕ್ಕೆ ಕೆಲಸ ನೀಡಬೇಕು ಅಲ್ಲದೇ ಸೇವೆ ಖಾಯಂಗೊಳಿಸುವ ತನಕ 21 ಸಾವಿರ ರೂಪಾಯಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಕೊರೋನಾ ಸಂದರ್ಭದಲ್ಲಿ ನಿಧನರಾದ ಅಂಗನವಾಡಿ ಕಾರ್ಯೆಕರ್ತರಿಗೆ 30 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು ಎಂದು ಘೋಷಣೆ ಕೂಗಿ ಬೇಡಿಕೊಂಡರು.
ಈ ನಮ್ಮ ಬೇಡಿಕೆಗಳು ಕೂಡಲೇ ಈಡೇರಿಸಬೇಕೆಂದು ಯಾದಗಿರಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
PublicNext
17/08/2021 04:42 pm