ಬೆಳಗಾವಿ: ಕುಂದಾನಗರಿಯ ಸಾರ್ವಜನಿಕರ ವಿರೋಧದ ನಡುವೆಯೂ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಬರುವ ತಿಂಗಳು ಅಂದರೆ ಸಪ್ಟೆಂಬರ್ 3 ರಂದು ನಡೆಸಲು ಎಲ್ಲ ರೀತಿಯಿಂದ ಜಿಲ್ಲಾಡಳಿತ ಮತ್ತು ಪಾಲಿಕೆಯ ಆಡಳಿತದಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಭಾಷೆ ಮತ್ತು ಗಡಿ ವಿವಾದ ಹಿನ್ನಲೆ ಬೆಳಗಾವಿ ಪಾಲಿಕೆ ಈ ಹಿಂದೆ ಸರಕಾರದ ಕೆಂಗಣ್ಣಿಗೆ ತುತ್ತಾಗಿ ಸೂಪರ ಸೀಡ್ ಆಗಿ ಯಾವುದೇ ಮೇಯರ್ ಮತ್ತು ಸದಸ್ಯರಿಲ್ಲದೆ ಅಭಿವೃದ್ಧಿ ಮರಿಚೀಕೆಯಾಗಿತ್ತು
ಕಾಂಗ್ರೆಸ್ ಈ ಬಾರಿ ಬೆಳಗಾವಿ ಪಾಲಿಕೆ ಚುನಾವಣೆಗೆ ಪಕ್ಷದ ಚಿನ್ಹೆಯ ಮೇಲೆ ಸ್ಪರ್ಧೆ ಮಾಡುತ್ತೆ ಎನ್ನುತ್ತಲೆ ಟೀಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಅವರ ಮನೆಗೆ ದೌಡಾಯಿಸುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಗೆದ್ದು ಮುಂದಿನ ಐದು ವರ್ಷ ಹೇಗಾದರೂ ಅಧಿಕಾರ ಹಿಡಿಯಬೇಕು ಎಂಬ ಇರ್ಯಾದೆ ಯೊಂದಿಗೆ ಸಾಕಷ್ಟು ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮನೆಯ ಮುಂದಿ ಸರದಿ ಸಾಲಿನಲ್ಲಿ ನಿಂತುಕೊಳ್ಳು್ತಿರುವ ದೃಶ್ಯಗಳು ಈಗ ಸರ್ವೆ ಸಾಮನ್ಯವಾಗಿವೆ.
ಬೆಳಗಾವಿ ಮಹಾನಗರ ಪಾಲಿಕೆಯು 58 ವಾರ್ಡಗಳನ್ನು ಒಳಗೊಂಡಿದೆ. ಈಬಾರಿ ಕೆಲ ವಾರ್ಡಗಳಲ್ಲಿ ಮೀಸಲಾತಿಯು ಅದಲು ಬದಲಾಗಿದೆ. ಜೊತೆಗೆ ಸ್ಥಳೀಯ ಕೆಲ ಬಿಜೆಪಿ ಕಾರ್ಯಕರ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ತನ್ನ ಪಕ್ಷದ ಚಿನ್ಹೆ ಮೇಲೆ ಚುನಾವಣೆ ನಡೆಸಿದರೆ ಕಾಂಗ್ರೆಸ್ ಕಡೆಯಿಂದ ಟಿಕೆಟ್ ಪಡೆಯಲು ಸಾಕಷ್ಟು ಆಕಾಂಕ್ಷಿಗಳು ಸತೀಶ್ ಜಾರಕಿಹೊಳಿ ಮನೆ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
PublicNext
16/08/2021 01:11 pm