ಬೆಂಗಳೂರು: ಬೇಕಿದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂಬ ಸಿ.ಟಿ ರವಿ ಹೇಳಿಕೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಇತಿಹಾಸ ಗೊತ್ತಿಲ್ಲ. ಯಾರಿಗೆ ಗೌರವ ಕೊಡಬೇಕು ಅನ್ನೋದೂ ಗೊತ್ತಿಲ್ಲ. ಸಂವಿಧಾನ ಬದಲಿಸ್ತೀವಿ ಅನ್ನೋರಿಗೆ ದೇಶ ಕಟ್ಟಿದವರ ಬಗ್ಗೆ ಏನು ಗೊತ್ತಿರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೇಕಿದ್ರೆ ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ತೆರೆಯಲಿ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಗುಜರಾತ್ ಅಹಮ್ಮದಾಬಾದ್ ನಲ್ಲಿ ನರೇಂದ್ರ ಮೋದಿ ಹೆಸರು ಯಾಕೆ ಇಟ್ಟಿದ್ದಾರೆ? ದೆಹಲಿಯಲ್ಲಿ ಅರುಣ್ ಜೇಟ್ಲಿ, ವಾಜಪೇಯಿ, ದೀನ ದಯಾಳ್ ಉಪಧ್ಯಾಯ, ಸಾವರ್ಕರ್ ಹೆಸರೆಲ್ಲಾ ಯಾಕಿಟ್ಟರು? ಅವರ ಹೆಸರಲ್ಲಿ ಹುಕ್ಕಾ ಬಾರ್ ಇಡಬಹುದಲ್ಲ. ನಾನು ಹಾಗೆ ಹೇಳಲ್ಲ. ಅಷ್ಟು ಲಘುವಾಗಿ ಮಾತನಾಡಲ್ಲ ಎಂದು ಕಿಡಿಕಾರಿದರು.
PublicNext
12/08/2021 04:02 pm