ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಕೆದಾಟು ವಿಚಾರದಲ್ಲಿ ನಾನು 'ಭಾರತದ ಪರ': ಸಿ.ಟಿ. ರವಿ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಜಟಾಪಟಿ ನಡೆದಿದೆ. ಈ ವಿಚಾರದಲ್ಲಿ ತಾವು 'ಭಾರತದ ಪರ' ಎಂಬ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ನೀಡಿದ್ದಾರೆ.

ಸಿ.ಟಿ. ರವಿ ಅವರು ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮಗಳು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನೀವು ತಮಿಳುನಾಡು ಪರವೋ ಅಥವಾ ಕರ್ನಾಟಕದ ಪರವೋ ಎಂದು ಪ್ರಶ್ನಿಸಿದಾಗ ನಾನು 'ಭಾರತದ ಪರ' ಎಂದು ಸಿ.ಟಿ. ರವಿ ಹೇಳಿದ್ದಾರೆ.

ನೀವು ನನ್ನ ಹೇಳಿಕೆಯನ್ನು ಹೇಗೆ ವಿಶ್ಲೇಷಿಸುತ್ತೀರಿ ಅನ್ನೋದು ಮುಖ್ಯವಲ್ಲ. ನಾನು ಹೇಳ್ತೇನೆ ಅನ್ನೋದು ಮುಖ್ಯ. ಕಾವೇರಿ ನೀರಿನ ಹಂಚಿಕೆ ಮಾಡಿಯಾಗಿದೆ. ಹಲವು ತೀರ್ಪುಗಳು ಬಂದಿವೆ. ತೀರ್ಪಿನ ವ್ಯಾಪ್ತಿಯೊಳಗೆ ಕರ್ನಾಟಕ ಮತ್ತು ತಮಿಳುನಾಡು ನೀರು ಹಂಚಿಕೆ ಮಾಡಿಕೊಂಡರೆ ಯಾವುದೇ ಅಡ್ಡಿಯಿಲ್ಲ. ತೀರ್ಪಿನಂತೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದ್ದರೆ ಯಾವುದೇ ಅಡ್ಡಿಬರೋದಿಲ್ಲ.. ನೀರು ಎಲ್ಲರಿಗೂ ಅತ್ಯವಶ್ಯಕ.. ಕುಡಿಯೋ ನೀರಿಗೆ ಗಡಿಯಿಲ್ಲ. ನೀರಿಗೆ ರಾಜಕೀಯವಿಲ್ಲ ಎಂದರು.

Edited By : Vijay Kumar
PublicNext

PublicNext

12/08/2021 04:01 pm

Cinque Terre

29.35 K

Cinque Terre

7

ಸಂಬಂಧಿತ ಸುದ್ದಿ