ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಪ್ಪಿದ ಮಂತ್ರಿಗಿರಿ: ಸೈನಿಕನ ಬೆನ್ನಲ್ಲೇ ದೆಹಲಿಗೆ ತೆರಳಿದ 'ಬೆಳಗಾವಿ ಸಾಹುಕಾರ'

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಿ.ಪಿ ಯೋಗೇಶ್ವರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ನಾಯಕರು ಬಂಡಾಯ ಎದ್ದಿದ್ದಾರೆ.

ಸಿ.ಪಿ ಯೋಗೇಶ್ವರ್ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದಾರೆ. ಅವರು ಬೆಳಗಾವಿ ಮೂಲಕ ದೆಹಲಿಗೆ ತಲುಪಿದ್ದು, ಖಾಸಗಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ಇಂದು ರಮೇಶ್ ಜಾರಕಿಹೊಳಿ ಹಿರಿಯ ನಾಯಕರನ್ನ ಭೇಟಿಯಾಗುವ ಸಾಧ್ಯತೆ ಇದೆ. ಯೋಗೇಶ್ವರ್ ಮತ್ತು ಜಾರಕಿಹೊಳಿ ಒಟ್ಟಾಗಿ ವರಿಷ್ಠರ ಭೇಟಿಗೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಈ ಇಬ್ಬರೂ ನಾಯಕರು ಮಹತ್ವದ ಪಾತ್ರ ನಿರ್ವಹಿಸಿದ್ದರು ಎಂದು ಹೇಳಲಾಗಿತ್ತು. ಸದ್ಯ ಇಬ್ಬರೂ ನಾಯಕರು ಸಂಪುಟದಲ್ಲಿಲ್ಲ.

Edited By : Vijay Kumar
PublicNext

PublicNext

09/08/2021 10:10 pm

Cinque Terre

33.87 K

Cinque Terre

3

ಸಂಬಂಧಿತ ಸುದ್ದಿ