ವಿಜಯಪುರ: ಕೊಟ್ಟಿರುವ ಖಾತೆಯಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ. ಯಾವುದೇ ಅಸಮಧಾನ ಇಲ್ಲ. ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಇವತ್ತು ಮಹಾಪೂರ ಬರ್ತಿದೆ, ಕೊರೊನಾ ಇದೆ. ಇಂತಹ ಸಂದರ್ಭದಲ್ಲಿ ಅಸಮಾಧಾನ ಪಡುವುದು ಸರಿಯಲ್ಲ. ಕೊಟ್ಟಂತಹ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದೇನೆ. ಹೊರ ರಾಜ್ಯ ದೇವಸ್ಥಾನಗಳಿಗೆ ತೆರಳುವ ನಮ್ಮ ರಾಜ್ಯ ಭಕ್ತರಿಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
PublicNext
09/08/2021 02:38 pm