ಕೋಲ್ಕತ್ತ: ಕೇಂದ್ರ ಚುನಾವಣೆ ಆಯೋಗ ಪಶ್ಚಿಮ ಬಂಗಾಳದ 294 ಕ್ಷೇತ್ರ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ದೀದಿ ನಾಡಲ್ಲಿ 8 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಕೇಂದ್ರ ಚುನಾವಣೆ ಆಯೋಗ ಸುದ್ದಿಗೋಷ್ಠಿ ಮುಕ್ತಾಯಗೊಳ್ಳುತ್ತಿದ್ದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾಧ್ಯಮಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಆಯೋಗದ ನಿರ್ಧಾರ ನಾನು ಗೌರವಿಸುತ್ತೇನೆ. ಆದರೆ, ಜಿಲ್ಲೆಗಳನ್ನ ಒಡೆದಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ದಕ್ಷಿಣ 24 ಪರಗಣ ನಮ್ಮ ಭದ್ರಕೋಟೆಯಾಗಿದ್ದು, ಅಲ್ಲಿ ಮತದಾನ ಮೂರು ವಿಭಿನ್ನ ಹಂತಗಳಲ್ಲಿ ನಡೆಯಲಿದೆ. ಮೋದಿ ಮತ್ತು ಶಾ ಅವರ ಅನುಕೂಲಕ್ಕೆ ಅನುಗುಣವಾಗಿ ಇದನ್ನ ಮಾಡಲಾಗಿದೆಯೇ? ಎಂದು ಮಮತಾ ಪ್ರಶ್ನೆ ಮಾಡಿದ್ದಾರೆ.
PublicNext
27/02/2021 12:28 pm