ನವದೆಹಲಿ: ದೆಹಲಿ ಪೊಲೀಸರ ಕರ್ತವ್ಯಕ್ಕೆ ಕಳುಹಿಸಲಾದ ಡಿಟಿಸಿ ಬಸ್ಸುಗಳನ್ನು ಕೂಡಲೇ ಡಿಪೋಗೆ ಮರಳುವಂತೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಸೂಚನೆ ನೀಡಿದೆ. ಈ ನಿರ್ಧಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಭದ್ರತಾ ಕರ್ತವ್ಯಕ್ಕಾಗಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಗೆ ನೀಡಿದ ಡಿಟಿಸಿ ಬಸ್ಸುಗಳನ್ನು ಹಿಂತೆಗೆದುಕೊಂಡಿದೆ. ಆಮ್ ಆದ್ಮಿ ಪಕ್ಷದ ಪಂಜಾಬ್ ಆಕಾಂಕ್ಷೆಗಳಿಗಾಗಿ ದೆಹಲಿಯವರು ಬಳಲುತ್ತಿದ್ದಾರೆ. ಇದು ನಿಜಕ್ಕೂ ಅರಾಜಕತೆ'' ಎಂದು ಕಿಡಿಕಾರಿದ್ದಾರೆ.
PublicNext
04/02/2021 12:47 pm