ನವದೆಹಲಿ: ಸುಳ್ಳು, ಪ್ರಚೋದನಕಾರಿ ಹಾಗೂ ಬೆದರಿಕೆಯ ಟ್ವೀಟ್‌ಗಳನ್ನು ಮಾಡುತ್ತಿದ್ದ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಗೃಹ ಸಚಿವಾಲಯದಿಂದ ಮನವಿ ಸಲ್ಲಿಕೆಯಾಗಿತ್ತು ಎಂಬ ಮಾಹಿತಿ ಸರ್ಕಾರದ ವಿಶ್ವಾಸಾರ್ಹ ಮೂಲಗಳಿಂದ ದೊರತಿದೆ. ಈ ಹಿನ್ನೆಲೆಯಲ್ಲಿ ಸುಮಾರು 250 ಖಾತೆಗಳ ಮೇಲೆ ಟ್ವಿಟರ್ ನಿರ್ಬಂಧ ಹೇರಿದೆ.
'ರೈತರ ಮಾರಣಹೋಮಕ್ಕೆ ಮೋದಿ ಯೋಜನೆ' ಎನ್ನುವ ಅರ್ಥ ಬಹುವಂತಹ ಹ್ಯಾಷ್‌ಟ್ಯಾಗ್ (#ModiPlanningFarmerGenocide) ಬಳಸಿ ಟ್ವೀಟ್ ಮಾಡಲಾಗುತ್ತಿದ್ದ ಖಾತೆಗಳನ್ನು ನಿರ್ಬಂಧಿಸಲಾಗಿದೆ. ರೈತರ ಪ್ರತಿಭಟನೆ ನಡೆಯುತ್ತಿರುವುದರಿಂದ ಕಾನೂನು ಮತ್ತು ಸುವ್ಯವ್ಥೆಯ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಟ್ವಿಟರ್‌ಗೆ ಮನವಿ ಮಾಡಿತ್ತು ಎಂದು ತಿಳಿದು ಬಂದಿರುವುದಾಗಿ ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ
PublicNext
01/02/2021 07:55 pm