ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2021 ಬಜೆಟ್ : ಡಿಜಿಟಲ್ ಪಾವತಿ ಉತ್ತೇಜನಕ್ಕೆ 1,500 ಕೋಟಿ ರೂ. ಯೋಜನೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ, ಡಿಜಿಟಲ್ ಪಾವತಿಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಡಿಜಿಟಲ್ ಪಾವತಿ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲು ಮತ್ತು ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಆರ್ಥಿಕ ಪ್ರೋತ್ಸಾಹ ನೀಡುವ 1,500 ಕೋಟಿ ರೂ. ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್ ಟಿ ಎಲ್ ಎಂ)ಎಂಬ ಹೊಸ ಉಪಕ್ರಮವನ್ನು ಪ್ರಸ್ತಾಪಿಸಲಾಗಿದ್ದು, ಇದು ಇಂಟರ್ ನೆಟ್ ನಲ್ಲಿ ಆಡಳಿತ ಮತ್ತು ನೀತಿಗಳಿಗೆ ಸಂಬಂಧಿಸಿದ ಜ್ಞಾನ ಭಂಡಾರದ ಡಿಜಿಟಲೀಕರಣ, ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿರುವ ಪಿಎಸ್ಯು ನ್ಯೂ ಸ್ಪೇಸ್ ಇಂಡಿಯಾ ನಿಯಮಿತ (ಎನ್ ಎಸ್ ಐ ಎಲ್) ಪಿ ಎಸ್ ಎಲ್ ವಿ-ಸಿ ಎಸ್ 51 ಉಡಾವಣೆಯನ್ನು ಕಾರ್ಯಗತಗೊಳಿಸಲಿದ್ದು, ಕೆಲವು ಚಿಕ್ಕ ಭಾರತೀಯ ಉಪಗ್ರಹಗಳ ಜೊತೆಗೆ, ಬ್ರೆಜಿಲ್ನಿಂದ ಅಮೆಜೋನಿಯಾ ಉಪಗ್ರಹವನ್ನು ಹೊತ್ತೊಯ್ಯುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಡಿಸೆಂಬರ್ 2021ರಲ್ಲಿ ಪ್ರಾರಂಭವಾಗಲಿರುವ ಗಗನಯಾನ ಮಿಷನ್ ಗೆಂದು ಭಾರತದ ನಾಲ್ಕು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಉಡ್ಡಯನದ ಸಾಮಾನ್ಯ ಅಂಶಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

01/02/2021 06:19 pm

Cinque Terre

58.44 K

Cinque Terre

0

ಸಂಬಂಧಿತ ಸುದ್ದಿ