ನವದೆಹಲಿ: ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ಸಹಸ್ರಾರು ರೈತರು ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಕುಟುಂಬದಿಂದ ಒಬ್ಬರು ಹೋರಾಟದಲ್ಲಿ ಭಾಗವಹಿಸದಿದ್ದರೆ ಆ ಕುಟುಂಬಕ್ಕೆ 1500ರೂ ದಂಡ ಹಾಕುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಪಂಜಾಬ್ ನ ಭಟಿಂಡಾದ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ವಿರ್ಕ್ ಖುರ್ದ್ ಗ್ರಾಮ ಪಂಚಾಯತ್ ನ ಗ್ರಾಮವೊಂದರ ಮಹಿಳೆ ಸರ್ಪಂಚ್ ಮಂಜಿತ್ ಕೌರ್ ಎಂಬ ಮಹಿಳೆ ಈ ವಿಷಯ ಬಹಿರಂಗಪಡಿಸಿದ್ದಾರೆ.
ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಒಂದು ಮನೆಯಿಂದ, ಒಂದು ವಾರ ಕನಿಷ್ಟ ಒಬ್ಬರನ್ನಾದರೂ ಹೋರಾಟಕ್ಕೆ ಕಳುಹಿಸಬೇಕು ಇಲ್ಲದಿದ್ರೆ 1500ರೂ ದಂಡ ಹಾಕಲಾಗುತ್ತಿದೆ. ದಂಡ ಪಾವತಿಸಲು ನಿರಾಕರಿಸಿದರೆ ಬಹಿಷ್ಕಾರದ ಬೆದರಿಕೆ ಹಾಕುತ್ತಿದ್ದಾರೆ ಎಂದು ಸರ್ಪಂಚ್ ಮಂಜಿತ್ ಕೌರ್ ಹೇಳಿದ್ದಾರೆ.
PublicNext
30/01/2021 04:25 pm