ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಗೆ ಬಂದಿಳಿದ ಸಿಎಂ ಯಡಿಯೂರಪ್ಪ: "ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನದ ಮಾತನಾಡಿದ್ದಾರೆ"

ಉಡುಪಿ: ಎರಡು ದಿನಗಳ ಉಡುಪಿ ಪ್ರವಾಸಕ್ಕೆ ಸಿಎಂ ಯಡಿಯೂರಪ್ಪ ಈಗಷ್ಟೇ ಆಗಮಿಸಿದ್ದಾರೆ.ಆದಿ ಉಡುಪಿ ಹೆಲಿಪ್ಯಾಡ್ ಗೆ ಬಂದಿಳಿದ ಬಿಎಸ್ ವೈ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು."ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಉದ್ಧಟತನದ ಮಾತನಾಡಿದ್ದಾರೆ. ಅವರ ಮಾತು ಒಕ್ಕೂಟ ವ್ಯವಸ್ಥೆ ವಿರುದ್ಧ ಆಗಿದೆ.

ಮತ್ತೆ ಮತ್ತೆ ಮಾತನಾಡೋದು ಸರಿಯಲ್ಲ.ಕರ್ನಾಟಕದಲ್ಲಿ ಸೌಹಾರ್ದ ವಾತಾವರಣ ಇದೆ. ಅವರ ಮಾತು ಶೋಭೆ ತರುವ ಹೇಳಿಕೆ ಅಲ್ಲ. ನಾನು ಇದನ್ನು ಖಂಡಿಸುತ್ತೇನೆ.ಕರ್ನಾಟಕದ ಒಂದಿಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ" ಎಂದರು.

"ಠಾಕ್ರೆ ಮಾತು ಎಲ್ಲರಿಗೂ ಆಕ್ರೋಶ ತರುತ್ತಿದೆ.ಕನ್ನಡ ಪರ ಸಂಘಟನೆ ತಲೆಕೆಡಿಸಿಕೊಳ್ಳಬಾರದು.ನಾವು ಕನ್ನಡಿಗರು ಒಟ್ಟಾಗಿ, ಒಂದಾಗಿ ಇರೋಣ" ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Edited By : Manjunath H D
PublicNext

PublicNext

18/01/2021 05:00 pm

Cinque Terre

88.74 K

Cinque Terre

5

ಸಂಬಂಧಿತ ಸುದ್ದಿ