ರಾಮನಗರ: ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಾವಧಿ ಆಡಳಿತ ನಡೆಸಲಾಗದ ಶಾಪ ಒಕ್ಕಲಿಗ ಸಮುದಾಯಕ್ಕಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾಸ್ವಾಮಿ ಹೇಳಿದ್ದಾರೆ.
ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣ ಸ್ವಾಮಿಗೆ 101 ರೂ.ಗಳ "ತಪ್ಪು ಕಾಣಿಕೆ" ಅರ್ಪಿಸಿದ ಬಳಿಕದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಒಕ್ಕಲಿಗ ನಾಯಕರು ಯಾರೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂದರು. ವಿಧಾನಸಭೆಗೆ ಈ ಕ್ಷಣವೇ ಚುನಾವಣೆ ನಡೆದರೂ ಎದುರಿಸಲು ನಾವು ಸಿದ್ಧರಿದ್ದೇವೆ.
ನಾನುಎರಡು ವಾರಿ ಸಿಎಂ ಆದರೂ ಅಧಿಕಾರ ಪೂರ್ಣಗೊಳಿಸಲು ಆಗಿಲ್ಲ. ಇದಕ್ಕೆ ದೇವರ ಶಾಪವೇ ಕಾರಣ ಎಂದು ಎಚ್ಡಿಕೆ ಹೇಳಿದ್ದಾರೆ. ಸಂಕ್ರಾಂತಿ ಬಳಿಕ ದೇವರಿಗೆ ತಪ್ಪು ಕಾಣಿಕೆ ಕಟ್ಟಿ, ದೇವರ ಆಶೀರ್ವಾದ ಪಡೆದು ಹೊಸ ರಾಜಕೀಯ ಪರ್ವ ಆರಂಭಿಸುವುದಾಗಿ ಎಚ್‌ಡಿಕೆ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಶುಕ್ರವಾರ ರಾಮನಗರ ಚಾಮುಂಡೇಶ್ವರಿ ಹಾಗೂ ಜಾಲಮಂಗಲದ ಲಕ್ಷ್ಮೀನಾರಾಯಣ ದೇಗುಲಗಳಿಗೆ ಕುಟುಂಬ ಸಮೇತರಾಗಿ ತೆರಳಿ ದೇವರಿಗೆ ₹101 ರೂ. ತಪ್ಪು ಕಾಣಿಕೆ ನೀಡಿದ್ದಾರೆ. ಈ ಮೂಲಕ ಹಿಂದಿನ ತಪ್ಪುಗಳನ್ನು ಮನ್ನಿಸುವಂತೆ ಬೇಡಿಕೊಂಡಿದ್ದಾರೆ.
PublicNext
16/01/2021 10:46 am