ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನೆರಡು ತಿಂಗಳಲ್ಲಿ ಮುನಿರತ್ನಗೆ ಮಂತ್ರಿಗಿರಿ ಭಾಗ್ಯ?

ಬೆಂಗಳೂರು: ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಆರ್​.ಆರ್.ನಗರ ಉಪಚುನಾವಣೆಯಲ್ಲಿ ಜಯ ಗಳಿಸಿದ್ದ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ಹೆಚ್ಚಾಗಿತ್ತು. ಆದರೆ ನಿರೀಕ್ಷೆ ಹುಸಿಯಾದ ಹಿನ್ನೆಲೆಯಲ್ಲಿ ಮುನಿರತ್ನ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವ​ರನ್ನು ಭೇಟಿಯಾಗಿದ್ದಾರೆ.

ಕುಮಾರಕೃಪಾದಲ್ಲಿ ಬುಧವಾರ ನಡೆದ ಈ ಭೇಟಿಯ ವಿಚಾರವಾಗಿ ಇಂದು ಮಾತನಾಡಿದ ಮುನಿರತ್ನ ಅವರು, ''ಮಂತ್ರಿಗಿರಿ ನನ್ನ ಹಣೆಯಲ್ಲಿ ಬರೆದಿಲ್ಲ ಎಂದುಕೊಳ್ಳುತ್ತೇನೆ. ಸಚಿವ ಸ್ಥಾನ ಸಿಗಬೇಕು ಎಂದು ಬರೆದಿದ್ದರೆ ಖಂಡಿತ ಸಿಗುತ್ತದೆ. ನಮ್ಮ ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದೇ ಸಿಗುತ್ತದೆ. ಸಿಎಂ ಯಡಿಯೂರಪ್ಪ ವಚನ ಭ್ರಷ್ಟರಲ್ಲ, ಮಾತಿಗೂ ತಪ್ಪಿಲ್ಲ. ಕೆಲವು ಸಂದರ್ಭದಲ್ಲಿ ಹೀಗಾಗುವುದು ಸಹಜ. ಹಾಗಂತ ರೋಡ್​ನಲ್ಲಿ ನಿಂತು ಮಾತನಾಡುವುದು ಒಳ್ಳೆಯದಲ್ಲ. ನಾನು ತಾಳ್ಮೆಯಿಂದ ಕೆಲಸ ಮಾಡುತ್ತೇನೆ'' ಎಂದು ಹೇಳಿದ್ದಾರೆ.

ಅರುಣ್​ ಸಿಂಗ್ ಅವರು ಇನ್ನು ಒಂದೂವರೆ ಅಥವಾ ಎರಡು ತಿಂಗಳಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ವೇಳೆ ಸಚಿವ ಸ್ಥಾನ ಸಿಗುವ ಭರವಸೆ ನೀಡಿದ್ದಾರೆ. ಒಂದು ವೇಳೆ ಸಿಗದಿದ್ದರೆ ಹಣೆ ಬರಹದಲ್ಲಿ ಸಚಿವ ಸ್ಥಾನ ಬರೆದಿಲ್ಲ ಅಂದುಕೊಳ್ಳುತ್ತೇನೆ ಎಂದರು.

Edited By : Vijay Kumar
PublicNext

PublicNext

14/01/2021 02:39 pm

Cinque Terre

53.32 K

Cinque Terre

4

ಸಂಬಂಧಿತ ಸುದ್ದಿ