ಬೆಂಗಳೂರು: ಕೊರೊನಾ ಸೋಂಕಿನಿಂದ ಸಾವನಪ್ಪಿದ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಂದ ತೆರವಾದ ಸ್ಥಾನಕ್ಕೆ ಹೊಸ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಹೆಚ್ಚಿನ ತುರುಸು ಪಡೆಯುತ್ತಿದೆ.
ಸದ್ಯ ಜ. 17 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಆಗಮಿಸಲಿದ್ದು, ಅಂದೇ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಅಭ್ಯರ್ಥಿ ಹೆಸರು ಫೈನಲ್ ಮಾಡುವ ಸಾಧ್ಯತೆಯಿದೆ.
ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಕಾರಣ ಅನೇಕ ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ.
ಸುರೇಶ್ ಅಂಗಡಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಹಲವರು ಒತ್ತಡ ಹೇರುತ್ತಿದ್ದಾರೆ, ಕೋವಿಡ್ -19 ರ ಕಾರಣದಿಂದಾಗಿ ಅವರ ಸಾವು ಉಪಚುನಾವಣೆಯನ್ನು ಅನಿವಾರ್ಯಗೊಳಿಸಿತು, ತೆರವಾದ ಸ್ಥಾನಕ್ಕೆ ಅನೇಕ ಪಕ್ಷದ ಮುಖಂಡರು ಟಿಕೆಟ್ ಗಾಗಿ ಲಾಬಿ ಮಾಡುತ್ತಿದ್ದಾರೆ.
ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಮತ್ತು ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಆರ್ಎಸ್ಎಸ್ ವಹಿಸಿದ ಪ್ರಮುಖ ಪಾತ್ರದ ತಿಳಿದ ಕೆಲವರು ಆರ್ ಎಸ್ ಎಸ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಅದೇನೆ ಇದ್ದರು ಶಾ ಭೇಟಿ ಬಳಿಕ ಯಾರಿಗೆ ಟಿಕೇಟ್ ಎನ್ನುವ ಸತ್ಯ ರಿವೀಲ್ ಆಗಲಿದೆ.
PublicNext
12/01/2021 01:02 pm