ಬೆಳಗಾವಿ: ಜನಸಂಘದಿಂದಲೂ ನಮ್ಮ ಕುಟುಂಬ ಆರ್ಎಸ್ಎಸ್ ಜೊತೆ ಹೀಗಾಗಿ ನಮ್ಮ ಕುಟುಂಬಕ್ಕೆ ಆರ್ಎಸ್ಎಸ್ ಹಿನ್ನಲೆ ಇದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ತಾಲೂಕಿನ ನಾವಲೆ ಗ್ರಾಮದ ಗಣೇಶ ಭಾಗದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಪೂರ್ವವೇ ಇದ್ದ ಜನಸಂಘದ ಜೊತೆಗೆ ನಾವಿದ್ದೇವೆ. ಆಗ ನಾವು ದೀಪದ ಚಿತ್ರ ಇದ್ದ ಕರಿ ಟೋಪಿ ಹಾಕುತ್ತಿದ್ದೆವು. ಸಂಘದಲ್ಲಿದ್ದಾಗ ನಮ್ಮ ತಂದೆ ಮೂರು ತಿಂಗಳು ಜೈಲಿನಲ್ಲಿದ್ದರು. ನಾವು ಉದಯವಾಗಿದ್ದು ಜನಸಂಘದಿಂದ. ಮೊದಲು ಹಾಫ್ ಚಡ್ಡಿ ಹಾಕುತ್ತಿದ್ದೆವು. ಆದರೆ ಅನಿವಾರ್ಯವಾಗಿ ಕಾಂಗ್ರೆಸ್ಗೆ ಹೋಗಬೇಕಾಯಿತು. ನನ್ನ ತಂದೆ ಜಗನ್ನಾಥ್ ಜೋಶಿಯವರ ಫಾಲೋವರ್ಸ್ ಆಗಿದ್ದರು. ಗೋವಾ ವಿಮೋಚನೆಗಾಗಿ ಹೋರಾಟ ಮಾಡಿ ಮೂರು ತಿಂಗಳು ಜೈಲಿನಲ್ಲಿದ್ದರು ಎಂದರು.
ನಮ್ಮ ವೈಫಲ್ಯದಿಂದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸೋಲಬೇಕಾಯಿತು. ಈ ಬಾರಿ ಹಾಗಾಗಲು ಅವಕಾಶ ನೀಡೋದಿಲ್ಲ. ಮುಂದಿನ ಚುನಾವಣೆ ನಮ್ಮದಾಗಲಿದೆ. ಬೆಳಗಾವಿಯಲ್ಲಿ ಮುಂದಿನ ಬಾರಿ ಭಗವಾ ಧ್ವಜ ಹಾರಿಸುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
PublicNext
10/01/2021 05:45 pm