ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜಯ್ ಪಾಟೀಲ್ ಹೋಗಿ ಬಂದಲ್ಲೆಲ್ಲ ತಮ್ಮ ವಿಶಿಷ್ಟ ಮಾತು ಪಂಚಿಂಗ್ ಶಾಯರಿಗಳ ಮೂಲಕ ಜನರನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಮತ್ತು ಆ ಮೂಲಕವೇ ಸುದ್ದಿಯಾಗ್ತಾರೆ. ಈ ಬಾರಿ ಮೈ ಚರ್ಮದ ಬಣ್ಣದ ಬಗ್ಗೆ ಮಾತನಾಡಿದ ಅವರು ಮತ್ತೆ ಸುದ್ದಿಯಾಗಿದ್ದಾರೆ.
ಕಪ್ಪಗಿರುವ ನನ್ನನ್ನು ಬಿಟ್ಟು ಬೆಳ್ಳಗಿರುವ ಅವರನ್ಉ ಆಯ್ಕೆ ಮಾಡಿದ್ರಿ ಎಂದು ಹೇಳುವ ಮೂಲಕ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಹೊರವಲಯದ ತೋಟದಲ್ಲಿ ಸುಳೇಭಾವಿ ಹಾಗೂ ಸಾಂಬ್ರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಅವರು, ಹೌದು ನಾನು ಮೊದಲೇ ಕಪ್ಪಗಿದ್ದೇನೆ. 10 ವರ್ಷಗಳ ಕಾಲ ಕಪ್ಪು ಮುಖದ ಶಾಸಕನನ್ನು ನೋಡಿ ಕ್ಷೇತ್ರದ ಜನರು ಬೇಸರಗೊಂಡಿದ್ದರು. ಹೀಗಾಗಿ ಹ್ಯಾಂಡ್ ಸಮ್, ಸುಂದರ ಮುಖದವರನ್ನು ಶಾಸಕರನ್ನಾಗಿ ಮಾಡಿ ನನ್ನನ್ನು ಬದಲಾಯಿಸಿದ್ದಾರೆ ಎಂದರು.
ಕಪ್ಪಗಿರುವ ನನ್ನನ್ನು ನೋಡಿ ನೋಡಿ ಕ್ಷೇತ್ರದ ಜನ ಬೇಸತ್ತಿದ್ದರು. ಅವರಿಗೆ ಬದಲಾವಣೆ ಬೇಕಿತ್ತು. ಹೀಗಾಗಿ ನನ್ನನ್ನು ಬದಲಿಸಿ ಹ್ಯಾಂಡ್ಸಮ್ ಆಗಿರುವ ಅವರನ್ನು ಆಯ್ಕೆ ಮಾಡಿದರು. ಅವರು ಕುಕ್ಕರ್, ಇಸ್ತ್ರೀ ಪೆಟ್ಟಿಗೆ, ಸೀರೆ ಕೊಟ್ಟು ಶಾಸಕರಾದರು ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ವ್ಯಂಗ್ಯವಾಡಿದ್ದರು.
PublicNext
08/01/2021 10:04 pm