ಭಾರತೀಯ ತಂಡದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶೇಷ ಮನವಿ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಅಲ್ಲದೇ ಹಸೀನ್ ಜಹಾನ್ ಅವರು ಇನ್ಸ್ಟಾಗ್ರಾಂ ಅಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಮನವಿ ಮಾಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ನಮ್ಮ ದೇಶ, ನಮ್ಮ ಗೌರವ. ನಾನು ಭಾರತವನ್ನು ಪ್ರೀತಿಸುತ್ತೇನೆ ನಮ್ಮ ದೇಶದ ಹೆಸರು ಹಿಂದೂಸ್ತಾನ್ ಅಥವಾ ಭಾರತ ಎಂದು ಮಾತ್ರ ಇರಬೇಕು‘ ಎಂದು ಬರೆದುಕೊಂಡಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿ, ಗೌರವಾನ್ವಿತ ಗೃಹ ಸಚಿವರಿಗೆ ಭಾರತದ ಹೆಸರನ್ನು ಬದಲಾಯಿಸಲು ವಿನಂತಿಸುತ್ತಿರುವೆ. ನಮ್ಮದ ದೇಶದ ಹೆಸರನ್ನು ಇಂಡಿಯಾ ಎಂದು ಕರೆಯುವ ಬದಲು ಭಾರತ ಅಥವಾ ಹಿಂದುಸ್ತಾನ್ ಎಂದು ಕರೆಯುವಂತೆ ಮಾಡಿ. ಇಡೀ ಜಗತ್ತು ನಮ್ಮ ದೇಶವನ್ನು ಭಾರತ ಅಥವಾ ಹಿಂದೂಸ್ತಾನ್ ಎಂಬ ಹೆಸರಿನಿಂದ ಮಾತ್ರ ಗುರುತಿಸಬೇಕು. ಬದಲಾಗಿ 'ಇಂಡಿಯಾ' ಎಂಬ ಹೆಸರಿನಿಂದ ಅಲ್ಲ' ಎಂದು ಬರೆದುಕೊಳ್ಳುವ ಮೂಲಕ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ..
ಇದರ ಜೊತೆ ಹಸೀನ್ ಜಹಾನ್ ಅವರು ದೇಶಭಕ್ತಿಯ ಗೀತೆ ದೇಶ್ ರಂಗೀಲಾದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
PublicNext
16/08/2022 08:54 pm