ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಭಾರೀ ಬೆಳವಣಿಗೆ ನಡೆಯುತ್ತಿವೆ. ಈಗ ಟೀಂ ಇಂಡಿಯಾ ಕ್ರಿಕೆಟರ್ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಹೂಗ್ಲಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರದ ರ್‍ಯಾಲಿ ವೇಳೆ ಮನೋಜ್ ತಿವಾರಿ ಅವರು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ತಿವಾರಿ, 'ಹೊಸ ಪಯಣ ಆರಂಭ' ಎಂದು ಬರೆದುಕೊಂಡಿದ್ದಾರೆ.
35ರ ಹರೆಯದ ಮನೋಜ್ ತಿವಾರಿ ಟೀಂ ಇಂಡಿಯಾ ಪರ 12 ಏಕದಿನ ಪಂದ್ಯಗಳಲ್ಲಿ 287 ರನ್, 1 ಟಿ20 ಇನ್ನಿಂಗ್ಸ್‌ನಲ್ಲಿ 15 ರನ್ ಗಳಿಸಿದ್ದಾರೆ. 85 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 1,695 ರನ್ ದಾಖಲಿಸಿದ್ದಾರೆ.
PublicNext
24/02/2021 04:07 pm