ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಮುಖ್ಯವಾಗಿದ್ದರೆ ನಿಮ್ಮ ಅಜ್ಜಂದಿರು ಭಾರತವನ್ನೇಕೆ ಆಯ್ಕೆ ಮಾಡಿಕೊಂಡರು?: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

ನವದೆಹಲಿ: ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯವೇ ಆಗಿದ್ದಲ್ಲಿ ನಿಮ್ಮ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವುದರ ಬದಲಾಗಿ ಭಾರತವನ್ನೇಕೆ ಆಯ್ಕೆ ಮಾಡಿಕೊಂಡರು? ಎಂದು ಬಿಜೆಪಿ ನಾಯಕ ಹಾಗೂ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಸದ್ಯ ಹಿಜಾಬ್-ಕೇಸರಿ ಶಾಲು ವಿವಾದ ಬಗೆಹರಿಯದ ಕಗ್ಗಂಟಾಗಿ ಪರಿಣಮಿಸಿದೆ. ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರು ನಮಗೆ ಶಿಕ್ಷಣಕ್ಕಿಂತ ಹಿಜಾಬ್ ಹಾಗೂ ಬುರ್ಖಾ ಮುಖ್ಯ ಎಂದು ವಾದ ಹಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಈ ಮೇಲಿನಂತೆ ಪ್ರಶ್ನೆ ಮಾಡಿದ್ದಾರೆ.

"ಮೊದಲು ಹಿಜಾಬ್ ನಂತರ ಶಿಕ್ಷಣ" ಎನ್ನುವುದಾದರೆ ನಿಮ್ಮ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಭಾರತದಲ್ಲೇ ಉಳಿಯುವ ಆಯ್ಕೆ ಏಕೆ ಮಾಡಿದರು? ಎನ್ನುವುದೇ ನನಗೆ ಆಶ್ಚರ್ಯವಾಗುತ್ತಿದೆ‌. ಒಂದು ವೇಳೆ ಮೊದಲನೇ ಆಯ್ಕೆ ಪಡೆದಿದ್ದರೆ ಹಿಜಾಬ್ ಸುಲಭವಾಗಿ ದೊರೆಯುತ್ತಿತ್ತು‌ ಎಂದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಅವರು, ಗಾಂಧಿಯನ್ನು ಗುಂಡಿಕ್ಕಿದ ಗೋಡ್ಸೆ ನೆಹರೂಗೆ ಸಂಪೂರ್ಣ ಅಧಿಕಾರ ನೀಡಿ ಪಟೇಲರನ್ನು ದುರ್ಬಲಗೊಳಿಸಿದ್ದಾ‌ನೆ. ಗೋಡ್ಸೆ ಮೂರ್ಖ ಎಂದು ಬರೆದಿದ್ದಾರೆ.

Edited By : Nagaraj Tulugeri
PublicNext

PublicNext

17/02/2022 09:35 am

Cinque Terre

66.31 K

Cinque Terre

37

ಸಂಬಂಧಿತ ಸುದ್ದಿ