ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಷ ದಸರಾ ಮಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆ ನಮಗೆ ಬೇಕಿಲ್ಲ: ಪ್ರೊ.ಮಹೇಶ್‌ ಚಂದ್ರಗುರು

ಮೈಸೂರು: ನಾವು ನಾಡಹಬ್ಬದಲ್ಲೂ ಪಾಲ್ಗೊಳ್ಳುತ್ತೇವೆ. ಅದರಂತೆ ಈ ನಾಡಿನ ಬಹುತ್ವದ ಪ್ರತೀಕವಾಗಿರುವ ಮಹಿಷ ದಸರಾ ಕೂಡ ಆಚರಿಸುತ್ತೇವೆ. ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡದೇ ಇರೋದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರೊ.ಮಹೇಶ್‌ ಚಂದ್ರಗುರು ಆಕ್ರೋಶ ಹೊರ ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ‘ನಮ್ಮ ವೋಟುಗಳು ಬೇಕು. ಆದರೆ ನಮ್ಮ ಸಂಸ್ಕೃತಿ ಬೇಡವಾ?’ ಎಂದು ಪ್ರಶ್ನಿಸಿದ್ದಾರೆ. ಹಿಂದಿನ ಸರ್ಕಾರ ಇದ್ದಾಗ ನಮಗೆ ಮಹಿಷ ದಸರಾ ಆಚರಿಸಲು ಅನುಮತಿ ಇತ್ತು. ಆದ್ರೆ ಈಗ ಕೇವಲ ಓರ್ವ ಸಂಸದನಿಗಾಗಿ ಬಿಜೆಪಿ ಸರ್ಕಾರ ನಮ್ಮ ಆಚರಣೆಗೆ ಅವಕಾಶ ನೀಡುತ್ತಿಲ್ಲ. ಇಲ್ಲಿನ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯಕ್ತರು ಗುಲಾಮಗಿರಿ ಮಾಡುತ್ತಿದ್ದಾರೆ. ‘ಮಹಿಷ ದಸರಾ ಆಚರಿಸಲು ಅನುಮತಿ ನೀಡದ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮರ್ಥರು. ತಮ್ಮ ಹುದ್ದೆಗಳಲ್ಲಿ ಮುಂದುವರೆಯಲು ಅನರ್ಹರು. ಅವರ ಸಂಸ್ಕೃತಿಗೆ ಅವರು ಜಿಂದಾಬಾದ್‌ ಹೇಳಿಕೊಳ್ಳಲಿ. ನಮ್ಮ ಸಂಸ್ಕೃತಿಗೆ ನಾವು ಜಿಂದಾಬಾದ್‌ ಹೇಳಿಕೊಳ್ಳುತ್ತೇವೆ’ ಎಂದರು.

Edited By : Nagaraj Tulugeri
PublicNext

PublicNext

04/10/2021 10:49 pm

Cinque Terre

55.53 K

Cinque Terre

2

ಸಂಬಂಧಿತ ಸುದ್ದಿ