ಬೆಂಗಳೂರು:ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರ ಜೊತೆ ಮಹದೇವಪುರ ವಿಧಾನಸಭಾಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್‌ಮಾಡಿಕೊಂಡಿದ್ದಾಳೆ.
ಇಂದು ಸಂಜೆ ರಾಜಭವನ ಬಳಿಯ ಖಾಸಗಿ ಹೋಟೆಲ್ ಮುಂದೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಶಾಸಕರ ಪುತ್ರಿಯಿರುವ ಕಾರನ್ನ ಅಡ್ಡಗಟ್ಟಿದ್ದಾರೆ.
ಇದಕ್ಕೆ ಅಸಮಾಧಾನಗೊಂಡ ಪುತ್ರಿ ಇದು ಎಂಎಲ್ಎ ಕಾರು. ಇದನ್ನ ಯಾಕೆ ತಡೆಯುತ್ತೀರಾ ಎಂದು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಪರಸ್ಪರ ಪೊಲೀಸರ ಹಾಗೂ ಪುತ್ರಿ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರ ನಡೆಯನ್ನು ಪ್ರಶ್ನಿಸಿ ಸ್ಥಳದಿಂದ ಪುತ್ರಿ ನಿರ್ಗಮಿಸಿದ್ದಾರೆ.
PublicNext
09/06/2022 10:50 pm