ನವದೆಹಲಿ: ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಓರ್ವ ಡೈನಾಮಿಕ್. ಅವರು ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಓದಿದವರಲ್ಲ. ಬದಲಾಗಿ ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದವರು ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಕಾನೂನು ಮಂತ್ರಿ ಕಿರಣ್ ರಿಜಿಜು ಓದಿದ್ದು ಸರ್ಕಾರಿ ಶಾಲೆಯಲ್ಲಿ ಅವರು ತಮ್ಮ ಹತ್ತನೇ ತರಗತಿ ಮುಗಿಸಿದಾಗ ಅವರ ಗ್ರಾಮಕ್ಕೆ ರಸ್ತೆ ಬಂದಿದೆ. ಹಾಗೂ 2006ರಲ್ಲಿ ಅವರು ಸಂಸದರಾದ ನಂತರ ಅವರ ಊರಿಗೆ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಸೌಲಭ್ಯ ಬಂದಿದೆ ಎಂದಿದ್ದಾರೆ. ಸಿಜೆಐ ರಮಣ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಕಿರಣ ರಿಜಿಜು, ಸಿಜೆಐ ರಮಣ ಅವರು ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
14/09/2021 11:16 am