ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶರದ್ ಪವಾರ್ ಗೆ 84ನೇ ಹುಟ್ಟು ಹಬ್ಬದ ಸಂಭ್ರಮ : ತಲ್ವಾರ್ ​ನಿಂದ ಕೇಕ್ ಕತ್ತರಿಸಿದ ಮಾಜಿ ಸಿಎಂ

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ 84 ನೇ ಹುಟ್ಟುಹಬ್ಬದ ಸಂಭ್ರಮಚರಣೆಯಲ್ಲಿದ್ದು, ಈ ಹಿನ್ನಲೆ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ.

ಶರದ್ ಪವಾರ್ ಅವರ ಹುಟ್ಟು ಹಬ್ಬದ ಹಿನ್ನಲೆ ಅಜಿತ್ ಪವಾರ್, ಅವರ ಪತ್ನಿ ಹಾಗೂ ರಾಜ್ಯಸಭೆ ಸಂಸದೆ ಸುನೇತ್ರಾ ಪವಾರ್ ಮತ್ತು ಪುತ್ರ ಪಾರ್ಥ್ ಅವರೊಂದಿಗೆ ಶರದ್ ಅವರ ಮನೆಗೆ ಆಗಮಿಸಿದ್ದು, ಕೇಕ್ ಕಟ್ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್, ಲೋಕಸಭೆ ಸಂಸದ ಸುನಿಲ್ ತಟ್ಕರೆ, ಮಾಜಿ ಸಚಿವ ಮತ್ತು ಎನ್‌ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಇನ್ನು ಶರದ್ ಪವಾರ್ ಅವರ ಹುಟ್ಟು ಹಬ್ಬಕ್ಕೆ ಪ್ರಧಾನಿ ಮೋದಿ ಶುಭಕೋರಿದ್ದು, ರಾಜ್ಯಸಭಾ ಸಂಸದ ಮತ್ತು ಹಿರಿಯ ನಾಯಕ ಶರದ್ ಪವಾರ್ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Edited By :
PublicNext

PublicNext

12/12/2024 04:20 pm

Cinque Terre

7.26 K

Cinque Terre

0

ಸಂಬಂಧಿತ ಸುದ್ದಿ