ಬೆಂಗಳೂರು: 10 ಕೋಟಿ ರೂ. ಮಾನನಷ್ಟ ಪ್ರಕರಣದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಹಿನ್ನಡೆಯಾಗಿದೆ.
ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರು ರಿಟ್ ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ್ದಾರೆ. ಇದಲ್ಲದೆ 9 ತಿಂಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಏನಿದು ಪ್ರಕರಣ?:
2012ರಲ್ಲಿ ನೈಸ್ ವಿರುದ್ಧ ಹೆಚ್.ಡಿ.ದೇವೇಗೌಡರ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆ ದಾವೆ ಹೂಡಿತ್ತು. ಹೀಗಾಗಿ ನೈಸ್ ಸಂಸ್ಥೆ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಜೊತೆಗೆ 10 ಕೋಟಿ ರೂ. ಮಾನನಷ್ಟ ಪರಿಹಾರ ಸಹ ಕೋರಿತ್ತು. ಆರೋಪ ಸಮರ್ಥನೆಗೆ ಸಾಕ್ಷ್ಯ ಒದಗಿಸಲು ಕೋರ್ಟ್ ಅವಕಾಶ ನೀಡಿತ್ತು. ಹಲವು ಅವಕಾಶ ನೀಡಿದರೂ ಸಾಕ್ಷ್ಯ ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ ದೇವೇಗೌಡರ ಸಾಕ್ಷ್ಯವನ್ನು ಮುಕ್ತಾಯಗೊಳಿಸಲಾಗಿತ್ತು. ಹೀಗಾಗಿ ಪ್ರತಿವಾದಿ ಸಾಕ್ಷ್ಯ ವಿಚಾರಣೆಗೆ ಅವಕಾಶ ಕೋರಿ ದೇವೇಗೌಡರು ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
PublicNext
17/01/2021 10:46 pm