ಕೊಪ್ಪಳ: ಹಿಜಾಬ್, ಕೇಸರಿ ಶಾಲು ಅಥವಾ ಇನ್ನಿತರ ಧಾರ್ಮಿಕ ಸೂಚಕ ಬಟ್ಟೆ ಧರಿಸಿ ಶಾಲಾ-ಕಾಲೇಜುಗಳಿಗೆ ಬರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೂ ಹೈಕೋರ್ಟ್ ಆದೇಶ ಮೀರಿದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕ್ಲಾಸ್‌ಗೆ ಬಂದಿದ್ದಾರೆ.
ಕೊಪ್ಪಳ ನಗರದ ಮೌಲಾನಾ ಆಜಾದ್ ಮಾಡೆಲ್ ಸ್ಕೂಲ್‌ನಲ್ಲಿ ಇಂದು SSLC ಪೂರಕ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಪರೀಕ್ಷಾ ಮೇಲ್ವಿಚಾರಕರು ಹಿಜಾಬ್ ತೆರೆಯುವಂತೆ ಹೇಳಿದರೂ ವಿದ್ಯಾರ್ಥಿನಿಯರು ಅದಕ್ಕೆ ಡೋಂಟ್ ಕೇರ್ ಎಂಬಂತೆ ತಮ್ಮ ಪಾಡಿಗೆ ತಾವು ಪರೀಕ್ಷೆ ಬರೆಯಲು ಆರಂಭಿಸಿದ್ದಾರೆ.
PublicNext
14/02/2022 11:00 am