ಗದಗ: ನಾನು ಅತ್ಯಂತ ನೋವಿನಿಂದ ಹೇಳ್ತೀನಿ. ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಹೊಡೆದಿದ್ದನ್ನು ತ್ರೀವವಾಗಿ ಖಂಡಿಸುತ್ತೇನೆ. ಆದರೆ ಆ ಮೊಟ್ಟೆಯನ್ನು ನಮ್ಮ ಪಕ್ಷದವರು ಎಸೆದರೋ ಅಥವಾ ತಾವಾಗಿಯೇ ಒಗೆಸಿಕೊಂಡರೋ ಅದು ತನಿಖೆಯಿಂದ ಹೊರ ಬರಲಿ ಎಂದು ಗದಗದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.
ಒಂದು ಮೊಟ್ಟೆ ಎಸೆದಿದ್ದಕ್ಕೆ ಕಾಂಗ್ರೆಸ್ ಯಾವ ರೀತಿ ರಾಜಕಾರಣ ಮಾಡುತ್ತಿದೆ ಎಂದರೆ ಕಾಶ್ಮೀರದಲ್ಲಿ ನಮ್ಮ ವೀರಯೋಧರಿಗೆ ಪಾಕಿಸ್ತಾನ್ ಶೆಲ್ ಬಡಿದಾಗ ಸಾಯುತ್ತಾರಲ್ಲ ಹಾಗೆ ಜೀವಕ್ಕೆ ಭಯ ಇದೆ ಎನ್ನುತ್ತಿದ್ದಾರೆ. ನೀವು ಬರೀ ಒಂದು ಮೊಟ್ಟೆಗೆ ಹೆದರಿದರೆ ಹೇಗೆ? ಪಕ್ಕದ ಕೇರಳದಿಂದ ಸಾವಿರಾರು ಮಂದಿಯನ್ನು ಒಳಗೆ ಬಿಟ್ಟಾಗ ನೀವೇ ಮುಖ್ಯಮಂತ್ರಿ ಇದ್ರಿ. ಎಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು? ಈಗ ಬರಿ ಒಂದು ಮೊಟ್ಟೆಗೆ ಹೆದರುತ್ತಿದ್ದೀರಿ. ತತ್ತಿ ಮೇಲೆ ರಾಜಕಾರಣ ಮಾಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದ್ದು ಶೋಚನೀಯ ಎಂದು ಹೇಳಿದರು.
ಕೊಡಗಿನಲ್ಲಿ ವಿಶೇಷವಾಗಿ ಟಿಪ್ಪುನ ಮೇಲೆ ಅಪಾರವಾದ ವಿರೋಧ ಇದೆ. ಅಲ್ಲೆ ಮಾಡಿರುವ ಮತಾಂತರ ಆಗಿರಬಹುದು ಇನ್ನೂ ಬೇರೆ ಆಗಿರಬಹುದು ಒಟ್ಟಿನಲ್ಲಿ ಕೊಡಗಿನಲ್ಲಿ ಅಪಾರ ವಿರೋಧ ಇದೆ. ಸಾವರ್ಕರ್ ಹಾಗೂ ಟಿಪ್ಪುವಿನ ಬಗ್ಗೆ ವಿರೋಧ ನಡೆಯುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಕಾನೂನು ಸುವ್ಯವಸ್ಥೆ ಹಾಳಾಗಲಿ ಎಂಬ ಉದ್ದೇಶಕ್ಕಾಗಿಯೇ ಹೋಗಿದ್ದಾರೆ. ಜವಾಬ್ದಾರಿಯುತ ನಾಯಕರಾದರು ಪ್ರಚಾರಕ್ಕಾಗಿ ಏನನ್ನೂ ಮಾಡಬಾರದು ಎಂದು ಹೇಳಿದರು.
PublicNext
20/08/2022 04:38 pm