ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಚಾರ ನಿಯಮ ಉಲ್ಲಂಘನೆ: 3 ವರ್ಷಗಳಲ್ಲಿ ₹660 ಕೋಟಿ ದಂಡ ಸಂಗ್ರಹ

ಬೆಂಗಳೂರು: ರಾಜ್ಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ₹660 ಕೋಟಿ ದಂಡ ಸಂಗ್ರಹಿತವಾಗಿದೆ. ಎಂದು ಗೃಹ ಸಚಿವಾ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಜ್ಞಾನೇಂದ್ರ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಸೂಲಿಯಾದ ಮೊತ್ತವನ್ನು ಹಲವೆಡೆ ಸಂಚಾರ ಸುಧಾರಣೆಗಾಗಿ ತಂತ್ರಜ್ಞಾನ ಅಳವಡಿಸಲು ವ್ಯಯಿಸಲಾಗುತ್ತಿದೆ. ಹೆದ್ದಾರಿ ಗಸ್ತು ವಾಹನ, ಇಂಟರ್‌ಸೆಪ್ಟರ್ ಖರೀದಿ, ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಕೇಸ್ ಹಾಕಲು ಬಳಸಲಾಗುವ ಪಿಡಿಎ ಸಾಧನ, ಸೂಚನಾ ಫಲಕ, ಮುಂತಾದ ಪರಿಕರಗಳನ್ನು ಖರೀದಿಸಲು ಈ ಹಣವನ್ನು ಬಳಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಉತ್ತರಿಸಿದ್ದಾರೆ‌.

Edited By : Nagaraj Tulugeri
PublicNext

PublicNext

18/03/2022 04:59 pm

Cinque Terre

56.07 K

Cinque Terre

4

ಸಂಬಂಧಿತ ಸುದ್ದಿ