ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಯಲಲಿತಾ ಆಪ್ತೆಗೆ 10 ಕೋಟಿ ದಂಡ : ದಂಡ ಪಾವತಿಸಿದ ಶಶಿಕಲಾ

ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ನ್ಯಾಯಾಲಯದ ಆದೇಶದಂತೆ 10 ಕೋಟಿ ರೂ.ದಂಡ ಪಾವತಿಸಿದ್ದಾರೆ.

ಆದಾಯಕ್ಕೆ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ್ದ ದಂಡವನ್ನು ವಿ.ಕೆ. ಶಶಿಕಲಾ ಪಾವತಿಸಿದ್ದಾರೆ.

ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ತಮ್ಮ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಪಾದಿಸಿದ ಆರೋಪ ಶಶಿಕಲಾ ಮೇಲಿತ್ತು.

ಬೆಂಗಳೂರಿನ ಪರಪ್ಪನ ಅಗ್ರಹಾರದ ಅತಿಥಿಯಾದ ಶಶಿಕಲಾ ಜೈಲಿನಿಂದಲೇ ನಿನ್ನೆ ಸಂಜೆ ಡಿಮ್ಯಾಂಡ್ ಡ್ರಾಪ್ಟ್ ಮೂಲಕ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ ಕಚೇರಿಗೆ ದಂಡದ ಮೊತ್ತವನ್ನು ಪಾವತಿಸಿದ್ದಾರೆ.

ಶಶಿಕಲಾ ಅವರ ಪರ ವಕೀಲ ರಾಜಾ ಸೆಂತೂರ್ ಪಾಂಡ್ಯನ್ ಈ ಬಗ್ಗೆ ವಿವರ ನೀಡಿದ್ದು ದಂಡ ಸಂದಾಯವಾದ ಬಳಿಕ ಮುಂದಿನ ಜನವರಿ 27 ರಂದು ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.

Edited By : Nirmala Aralikatti
PublicNext

PublicNext

18/11/2020 02:40 pm

Cinque Terre

55.41 K

Cinque Terre

4

ಸಂಬಂಧಿತ ಸುದ್ದಿ