ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆ. ಹಾಗೂ ಪಾಕಿಸ್ತಾನದ ವಿರೋಧ ಪಕ್ಷಗಳು ಇಮ್ರಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹವಣಿಸುತ್ತಿವೆ. ಈ ನಡುವೆ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ತಮ್ಮ ಮಾಜಿ ಪತಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. 'ಪಾಕಿಸ್ತಾನದ ಮಟ್ಟಿಗೆ ಇಮ್ರಾನ್ ಖಾನ್ ಈಗ ಕೇವಲ ಇತಿಹಾಸ. ಅವರು ಸೃಷ್ಟಿಸಿರುವ ಅವ್ಯವಸ್ಥೆ ಶುಚಿಗೊಳಿಸುವತ್ತ ಜನರು ಗಮನ ಹರಿಸಬೇಕು' ಎಂದು ರೆಹಮ್ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, "ಇಮ್ರಾನ್ ಈಗ ಇತಿಹಾಸ!! ನಯಾ ಪಾಕಿಸ್ತಾನದ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ನಾವು ಒಟ್ಟಾಗಿ ನಿಲ್ಲುವತ್ತ ಗಮನಹರಿಸಬೇಕು ಎಂದು ನಾನು ಭಾವಿಸುತ್ತೇನೆ. ಇಮ್ರಾನ್ ಖಾನ್ ಬಳಿ ಇಲ್ಲದಿರುವುದು "ಬುದ್ಧಿವಂತಿಕೆ ಮತ್ತು ಸಾಮರ್ಥ್ಯ" ಎಂದು ಅವರು ಟೀಕಿಸಿದ್ದಾರೆ. ಈ ಹಿಂದೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನದ ಪ್ರಧಾನಿ ಹೇಳಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರೆಹಮ್ ಖಾನ್, ಹೌದು, ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿರುತ್ತದೆ ಎಂದು ಟೀಕಿಸಿದ್ದಾರೆ.
PublicNext
01/04/2022 05:19 pm