ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಪ್ರಧಾನಿಗೆ ರಾಜಕೀಯ ಸಂಕಟ: 50 ಸಚಿವರು ಅಜ್ಞಾತ

ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ರಾಜಕೀಯ ಸಂಕಷ್ಟ ಮತ್ತಷ್ಟು ಹೆಚ್ಚಿದೆ. ತಮ್ಮ ಸರ್ಕಾರದ ಮೇಲೆ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಯು ಇಮ್ರಾನ್ ಖಾನ್‌ಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳು ಹೊಸ ಹೊಸ ಕಸರತ್ತುಗಳನ್ನು ಮಾಡುತ್ತಿದ್ದಾರೆ.

ಈ ನಡುವೆ ಕಳೆದೆರಡು ದಿನದಿಂದ 50 ಸಚಿವರು ಎಲ್ಲೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ನಡೆ ಇಮ್ರಾನ್ ಖಾನ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ, ಮಾಹಿತಿ ಸಚಿವ ಫಾವದ್ ಚೌಧರಿ, ಒಳಾಂಗಣ ಸಚಿವ ಶೇಕ್ ರಶೀದ್ ಸೇರಿದಂತೆ ಕಲ ಸಚಿವರು ಇಮ್ರಾನ್‌ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಇದು ಇಮ್ರಾನ್ ಬಣಕ್ಕೆ ಸಮಾಧಾನ ತಂದಿದೆ. 50 ಸಚಿವರನ್ನು ಸ್ವತಃ ಇಮ್ರಾನ್ ಖಾನ್ ಗೌಪ್ಯ ಸ್ಥಳದಲ್ಲಿ ಇರಿಸಿದ್ದಾರೆ ಎಂಬ ಮಾಹಿತಿ ಇದೆ. ಸೋಮವಾರ ವಿಶ್ವಾಸ ಮತ ಯಾಚನೆ ನಡೆಯಲಿದೆ. ಹೀಗಾಗಿ ಕೊನೆ ಕ್ಷಣದಲ್ಲಿನ ಬದಲಾವಣೆಗಳನ್ನು, ಆಘಾತಗಳನ್ನು ತಪ್ಪಿಸಲು ಆಪ್ತರ ಸಲಹೆ ಮೇರೆಗೆ ಆಡಳಿತ ಪಕ್ಷದ 50 ಸಚಿವರನ್ನು ಕೂಡಿಡಲಾಗಿದೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

27/03/2022 11:52 am

Cinque Terre

29.97 K

Cinque Terre

4

ಸಂಬಂಧಿತ ಸುದ್ದಿ