ಹಾವೇರಿ: ಉಕ್ರೇನ್ ನಲ್ಲಿ ರಷ್ಯಾದ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ಚಳಗೇರಿ ಗ್ರಾಮದ ಮೆಡಿಕಲ್ ವಿದ್ಯಾರ್ಥಿ ನವೀನ್ ಗ್ಯಾನಗೌಡ್ರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ರು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನವೀನನ ತಂದೆ ವರುಣಾ ಕ್ಷೇತ್ರದಲ್ಲಿ ಬರುವ ಪೇಪರ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ರು.. ಮೆಡಿಕಲ್ ಓದಲು ನವೀನ ಉಕ್ರೇನ್ ಗೆ ಹೋಗಿದ್ದ. ಆತನಿಗೆ ಭಾರತದಲ್ಲಿ ಮೆಡಿಕಲ್ ಸೀಟು ಸಿಗದೇ ಇದ್ದದ್ರಿಂದ ಉಕ್ರೇನ್ ಗೆ ಹೋಗಿದ್ದ. ನವೀನನ ಸಾವು ಇಡೀ ನಾಡಿನ ಜನರಿಗೆ ಆಗಿರುವ ನಷ್ಟ ಅಂದ್ರು. ಹಾಗೇ. ಮಾರ್ಚ್ 1 ಕ್ಕೆ ನವೀನ ಸಾವನ್ನಪ್ಪಿದ್ದಾನೆ. ಡೆಡ್ ಬಾಡಿ ಅಲ್ಲಿಯೇ ಇದೆ ಎಂದು ನವೀನನ ಮನೆಯವರಿಗೆ ಸುದ್ದಿ ಬಂದಿದೆ. ನವೀನನ ಡೆಡ್ ಬಾಡಿ ತರಿಸುವ ಕೆಲಸ ಈವರೆಗೂ ಆಗಿಲ್ಲ ಅಂತ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
PublicNext
09/03/2022 05:45 pm