ಚಂಡೀಗಢ: ಪಂಜಾಬ್‌ನ ಕೆಲವು ಕಾಂಗ್ರೆಸ್ ನಾಯಕರು ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಈಗಾಗಲೇ ಮಾಹಿತಿ ದೊರೆತಿದ್ದು ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಘಟನೆಗಳು ನಡೆದಿವೆ.
ಇದರ ಬೆನ್ನಲೇ ನವಜೋತ್ ಸಿಂಗ್ ಸಿಧು ಅವರಿಗೆ ಮಂತ್ರಿ ಸ್ಥಾನ ಕೊಡುವಂತೆ ಪಾಕಿಸ್ತಾನದಿಂದ ಮೆಸೇಜ್ ಬಂದಿದೆ ಎಂದು ಮಾಜಿ ಸಿಎಂ ಅಮರೀಂದರ್ ಸಿಂಗ್ ಹೇಳಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸಿಧು ಅವರ ಸ್ನೇಹಿತನೊಬ್ಬ ಈ ಸಂದೇಶ ಕಳುಹಿಸಿದ್ದಾರೆ ಎಂದು ಅಮರೀಂದರ್ ಸಿಂಗ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಮಾಹಿತಿ ನೀಡಿದ್ದೇನೆ. 2017ರಲ್ಲಿ ಸಿಧು ಕಾಂಗ್ರೆಸ್ ಸೇರಿದಾಗಲೇ ಅವರ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ನಾನು ಅಂದುಕೊಂಡಿದ್ದೆ. ಸಂದೇಶ ಬಂದಿದ್ದನ್ನು ಗಮನಕ್ಕೆ ತಂದರೂ ಸಿಧು ಬಗ್ಗೆ ಸೋನಿಯಾ ಗಾಂಧಿ ಏನನ್ನೂ ಹೇಳಿಲ್ಲ ಎಂದು ಅಮರೀಂದರ್ ಹೇಳಿದ್ದಾರೆ.
PublicNext
25/01/2022 07:51 pm