ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರುಣಾಚಲ ಗಡಿಯಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಯು.ಎಸ್ ರಕ್ಷಣಾ ಇಲಾಖೆ ಮಾಹಿತಿ

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ದೇಶದಿಂದ 100 ಮನೆಗಳುಳ್ಳ ಗ್ರಾಮ ನಿರ್ಮಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದೆ. ಟಿಬೆಟ್ ಸ್ವಾಯತ್ತ ಪ್ರದೇಶ ಹಾಗೂ ಅರುಣಾಚಲ ಪ್ರದೇಶದ ನಡುವಣ ವಿವಾದಿತ ಪ್ರದೇಶದಲ್ಲಿ ಈ ಗ್ರಾಮವನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ.

ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಸೇನೆ ನಿಯೋಜನೆಗೆ ಭಾರತದ ಪ್ರಚೋದನೆಯೇ ಕಾರಣ ಎನ್ನುತ್ತಿರುವ ಚೀನಾ, ಗಡಿಭಾಗದಲ್ಲಿ ಭಾರತವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು. ಇದರ ಹೊರತಾಗಿ ನಾವು ನಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ. ಭಾರತವು ಪ್ರತಿಪಾದಿಸುತ್ತಿರುವ ನೈಜ ಗಡಿ ರೇಖೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಚೀನಾದ ಸರ್ಕಾರ ನಿಯಂತ್ರಿತ ಮಾಧ್ಯಮವೊಂದು ಹೇಳಿದೆ. ಹಾಗೂ ಭಾರತವು ಅಮೆರಿಕದ ನೀತಿಯನ್ನು ಗಡಿಯಲ್ಲಿ ಉಪಯೋಗಿಸುತ್ತಿದೆ ಎಂದು ಚೀನಾ ಮಾಧ್ಯಮ ದೂರಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

Edited By : Nagaraj Tulugeri
PublicNext

PublicNext

06/11/2021 08:54 am

Cinque Terre

37.42 K

Cinque Terre

14

ಸಂಬಂಧಿತ ಸುದ್ದಿ