ಟೋಕಿಯೊ: ಜಪಾನ್ ನ ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿದಾ ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಜಪಾನ್ ನ ಸಂಸತ್ ಕಿಶಿದಾ ಅವರನ್ನು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ ನೂತನ ನಾಯಕನಾಗಿ ಆಯ್ಕೆ ಮಾಡುವುದಕ್ಕೆ ಮೊದಲಾಗಿಯೇ ನಿರ್ಗಮಿತ ಪ್ರಧಾನಿ ಯೋಶಿದೆ ಸುಗಾ ಅವರು ರಾಜೀನಾಮೆ ಸಲ್ಲಿಸಿದರು.
ಸುಗಾ ಅವರು ಕೇವಲ ವರ್ಷದೊಳಗೆಯೇ ಪದತ್ಯಾಗ ಮಾಡಿದ್ದು, ಕೋವಿಡ್ ಪಿಡುಗನ್ನು ನಿಭಾಯಿಸಿದ ರೀತಿಗೆ ಹಾಗೂ ಜನರ ವಿರೋಧದ ನಡುವೆಯೂ ಒಪಿಂಪಿಕ್ಸ್ ಆಯೋಜಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದರು.
PublicNext
04/10/2021 12:18 pm