ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ ಇತಿಹಾಸದಲ್ಲೇ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ ಎಂದು ಖ್ಯಾತ ಬಾಡಿ ಬಿಲ್ಡರ್, ಖ್ಯಾತ ಹಾಲಿವುಡ್ ನಟ ಅರ್ನಾಲ್ಡ್ ಕಿಡಿಕಾರಿದ್ದಾರೆ.
ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಅರ್ನಾಲ್ಡ್ ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕ್ಯಾಪಿಟಲ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಸಂಬಂಧ ವಿಡಿಯೋವನ್ನು ಟ್ವೀಟ್ ಮಾಡಿರುವ ಅವರು ಟ್ರಂಪ್ ಬೆಂಬಲಿಗರಿಂದ ನಡೆದ ಕೃತ್ಯವನ್ನು ಜರ್ಮನಿಯ ನಾಜಿ ದೌರ್ಜನ್ಯಕ್ಕೆ ಹೋಲಿಸಿದ್ದಾರೆ.
''ಜಗತ್ತಿನಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಕುರಿತು ನನ್ನ ಅಮೆರಿಕದ ಪ್ರಜೆಗಳಿಗೆ ಮತ್ತು ಗೆಳೆಯರಿಗೆ ಸಂದೇಶ” ಎಂದು ಬರೆದುಕೊಂಡು ಅರ್ನಾಡ್ ಟ್ವೀಟ್ ಮಾಡಿದ್ದಾರೆ. ''ಅಧ್ಯಕ್ಷ ಟ್ರಂಪ್ ಚುನಾವಣೆಯ ಫಲಿತಾಂಶಗಳನ್ನು ಮತ್ತು ನ್ಯಾಯಯುತವಾಗಿ ನಡೆದ ಚುನಾವಣೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ತಮ್ಮ ಸುಳ್ಳಿನಿಂದ ಜನರನ್ನು ತಪ್ಪುದಾರಿಗೆಳೆಯುವ ಮೂಲಕ ದೊಂಬಿಯೆಬ್ಬಿಸಲು ಬಯಸಿದರು. ಟ್ರಂಪ್ ಒಬ್ಬ ವಿಫಲ ನಾಯಕ. ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.
PublicNext
11/01/2021 12:16 pm